UK Suddi
The news is by your side.

ಬೆಳಗಾವಿ:ಬಸ್ ಡೇ ಗೆ ಚಾಲನೆ ನೀಡಿದ ಐಜಿಪಿ ಅಲೋಕ್ ಕುಮಾರ.

ಬೆಳಗಾವಿ:ನಗರದಲ್ಲಿ ವಾಯುವ್ಯ ಸಂಸ್ಥೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಬಸ್ ಡೇ ಕಾರ್ಯಕ್ರಮಕ್ಕೆ ಐಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು. 

ಸಾರಿಗೆ ಸಂಸ್ಥೆ ಬಸನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರಿಗೆ ಗುಲಾಬಿ ನೀಡಿ ಎಲ್ಲರ ಗಮನ ಸೆಳೆದರು.ಸಾರ್ವನಿಕರು ಸಾರಿಗೆ ಬಸ್ ಗಳಲ್ಲಿ ಸಂಚರಿಸುವ ಮೂಲಕ ಇದರ ಸದುಪಯೋಗ ಪಡೆಸಿಕೊಳ್ಳಬೇಕೆಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಗೆ ಸರಕಾರದಿಂದ ನೀಡುವ ಸಾರಿಗೆ ಸೌಲಭ್ಯವನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು. ಇದರಿಂದ ಸಂಚಾರ ಸಮಸ್ಯೆ ಉದ್ಭವವಾಗುವುದಿಲ್ಲ. ದ್ವಿಚಕ್ರ ವಾಹನದಿಂದ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್ ಡೇ ಮೂಲಕ ಸರಕಾರ ಜನತೆಗೆ ಅನಕೂಲ ಮಾಡಿಕೊಟ್ಟಿದೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಬಸ್ ನಲ್ಲಿ ಪ್ರಯಾಣ ಮಾಡುವಾಗ ಹಿರಿಯ ನಾಗರಿಕರು ಹಾಗೂ ವಿಶೇಷವಾಗಿ ಮಹಿಳೆಯರಿಗೆ ಮೀಸಲಿಟ್ಟ ಸ್ಥಳಗಳನ್ನು ಯುವಕರು ಬಿಟ್ಟುಕೊಡಬೇಕು. ನಿರ್ವಾಹಕರು ಟಿಕೆಟ್ ಗಾಗಿ ವಿನಾಕಾರಣ ಜಗಳ ಮಾಡುವುದು ಸರಿಯಲ್ಲ. ಕಳಕಳಿಯ ದೃಷ್ಠಿಯಿಂದ ಹಿರಿಯರು, ಮಹಿಳೆಯರು ಬಂದರೆ ಯುವಕರು ಆಸನ ವ್ಯವಸ್ಥೆಯನ್ನು ಬಿಟ್ಟುಕೊಡಬೇಕು ಎಂದರು.

ಬೆಳಗಿನ ಜಾವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ಡಿಸಿಪಿ ಸೀಮಾ ಲಾಟ್ಕರ,ಸಾರಿಗೆ ಸಂಸ್ಥೆ ಅದಿಕಾರಿಗಳು,ಚಾಲಕರು,ನಿರ್ವಾಹಕರು ಸೇರಿದಂತೆ ಮೊದಲಾದವರು ಹಾಜರಿದ್ದರು.

Comments