ರಾಹುಲ್ ಗಾಂಧಿ ಬೇಟಿ ಹಿನ್ನೆಲೆ:ಜಮಖಂಡಿಯಲ್ಲಿ ಪೂರ್ವಭಾವಿ ಸಭೆ.
ಜಮಖಂಡಿ: ಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಫೆ.25ರಂದು ಜಮಖಂಡಿಗೆ ಬೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶಾಸಕರಾದ ಸಿದ್ದು ನ್ಯಾಮಗೌಡ ಅವರು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ರಾಹುಲ ಗಾಂದಿ ಅವರು ಜಮಖಂಡಿಗೆ ಭೇಟಿ ನೀಡಲಿದ್ದು. ರೈತರಿಂದಲೇ ನಿರ್ಮಾಣವಾದ ದೇಶದ ಮೊದಲ ಬ್ಯಾರೇಜ್ ಖ್ಯಾತಿಯ (ಚಿಕ್ಕಪಡಸಲಗಿ ಬ್ಯಾರೇಜ್) ಶ್ರಮಬಿಂದು ಸಾಗರಕ್ಕೆ ಬಾಗೀನ ಅರ್ಪಿಸಿ ನಂತರ ಆಲಗೂರಿನಲ್ಲಿ ನಡೆಯುವ ಜನಾಶೀರ್ವಾದ ಸಭೆಯಲ್ಲಿ ಪಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸದರಿ ದಿನದಂದೆ ಸಾವಿರಾರು ಸಂಖ್ಯೆಯಲ್ಲಿ ತಾಯಂದಿರಿಗೆ/ಸಹೋದರಿಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆದ್ದರಿಂದ ದಿನಾಂಕ:21.02.2018ರಂದು ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ನ ಪಕ್ಷದ ಪಧಾಧಿಕಾರಿಗಳ, ಕಾರ್ಯಕರ್ತರ ಪೂರ್ವಭಾವಿ ಸಭೆ ಕರೆಯಲಾಗಿದೆ. ಕಾರಣ ಪಕ್ಷದ ಹಿರಿಯರು, ಮುಖಂಡರುಗಳು, ಬ್ಲಾಕ್ ಕಾಂಗ್ರೆಸ್ನ ಎಲ್ಲ ಪಧಾಧಿಕಾರಿಗಳು, ನಾಯಕರುಗಳು, ಕಾರ್ಯಕರ್ತರುಗಳು ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಸ್ಪರ ಸಲಹೆ, ಸೂಚನೆಗಳನ್ನು ಹಂಚಿಕೊಳ್ಳುವ ಮೂಲಕ 25.02.2018ರಂದು ರಾಹುಲ್ ಗಾಂಧಿಯವರು ಭಾಗವಹಿಸುತ್ತಿರುವ ಜನಾಶೀರ್ವಾದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ವಿನಂತಿಸಿಕೊಂಡರು.
ಜಮಖಂಡಿ ಬ್ಲಾಕ್ ಕಾಂಗ್ರೆಸ್ನ ಪೂರ್ವಭಾವಿ ಸಭೆಯು ಜಮಖಂಡಿಯ ಪಕ್ಷದ ಕಛೇರಿ (ನಂದಿ ಗ್ಯಾಸ್ ಎಜನ್ಸಿ ಮೇಲೆ, ಕುಡಚಿ ರಸ್ತೆ)ಯಲ್ಲಿ 21.02.18ರಂದು ಬೆಳೆಗ್ಗೆ 10.00ಘಂಟೆಗೆ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ನ ಪೂರ್ವಭಾವಿ ಸಭೆಯು ಜಮಖಂಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ 21.02.18ರಂದು ಸಾಯಂಕಾಲ 4:00ಘಂಟೆಗೆ ಜರುಗುವುದು ಎಂದು ಹೇಳಿದರು.