UK Suddi
The news is by your side.

ಲಿಂಗರಾಜ ಕಾಲೇಜಿಗೆ ಸಮಗ್ರ ವೀರಾಗ್ರಣೀ ಪ್ರಶಸ್ತಿ.

ಬೆಳಗಾವಿ:ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಹಾಗೂ ಚಿಕ್ಕೊಡಿಯ ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಆರನೇಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

ಕ್ರೀಡಾಕೂಟದಲ್ಲಿ 81 ಮಹಾವಿದ್ಯಾಲಯಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಲಿಂಗರಾಜ ಮಹಾವಿದ್ಯಾಲಯವು 07 ಸ್ವರ್ಣ ಪದಕ, 05 ಬೆಳ್ಳಿ ಪದಕ, ಹಾಗೂ 02 ಕಂಚಿನ ಪದಕ ಪಡೆದಿದೆ. ಮಹಿಳೆಯರ ವಿಭಾಗದಲ್ಲಿ 10 ಸ್ವರ್ಣಪದಕ, 05 ಬೆಳ್ಳಿಪದಕ, 04 ನಾಲ್ಕು ಕಂಚಿನ ಪದಕ ಪಡೆದುಕೊಂಡಿದೆ. ಒಟ್ಟು 17 ಚಿನ್ನದ ಪದಕ, 10 ಬೆಳ್ಳಿ ಪದಕ, ಹಾಗೂ 04 ಕಂಚಿನ ಪದಕ ಪಡೆದುಕೊಂಡಿದೆ.

ಪುರುಷರ ವಿಭಾಗದಲ್ಲಿ 90 ಅಂಕಗಳನ್ನು ಪಡೆದುಕೊಂಡು ಸಮಗ್ರ ವೀರಾಗ್ರಣಿ ಪ್ರಶಸ್ತಿ ಹಾಗೂ ಮಹಿಳೆಯರ ವಿಭಾಗದಲ್ಲಿ 111 ಅಂಕಗಳನ್ನು ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ. ಮಹಾವಿದ್ಯಾಲಯವು ಒಟ್ಟು 201 ಅಂಕಗಳನ್ನು ಪಡೆದು ಸತತ ಆರನೇ ಭಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

Comments