UK Suddi
The news is by your side.

ಜಲ, ವೃಕ್ಷ, ಶಿಕ್ಷಣಕ್ಕಾಗಿ ವಿಜಯಪುರದಲ್ಲಿ ಫೆ.25 ರಂದು ‘ವೃಕ್ಷಥಾನ್ 2018’ ಮ್ಯಾರಥಾನ್.

ವಿಜಯಪುರ:ರಾಜ್ಯದ ಜಲಸಂಪನ್ಮೂಲ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರ ಮುಂದಾಳತ್ವದಲ್ಲಿ ವಿಜಯಪುರದಲ್ಲಿ ಜಾರಿಯಲ್ಲಿರುವ ಕೋಟಿ ವೃಕ್ಷ ಅಭಿಯಾನದ ಭಾಗವಾಗಿ ಫೆಬ್ರವರಿ 25, 2018, ಭಾನುವಾರದಂದು ‘ಜಲ, ವೃಕ್ಷ, ಶಿಕ್ಷಣ’ಕ್ಕಾಗಿ ಓಟ ಎಂಬ ವಿಷಯದಡಿ ‘ವೃಕ್ಷಥಾನ್ 2018’, ಮ್ಯಾರಥಾನ್ ಓಟವನ್ನು ಏರ್ಪಡಿಸಲಾಗಿದೆ.
ವೃಕ್ಷಥಾನ್‍ನ ರಾಯಭಾರಿಯಾದ ಕನ್ನಡ ಚಲನಚಿತ್ರ ರಂಗದ ರಾಕಿಂಗ್ ಸ್ಟಾರ್ ಯಶ್ ಅವರು ಮ್ಯಾರಥಾನ್‍ನಲ್ಲಿ ಭಾಗವಹಿಸಲಿದ್ದು, ಸಾವಿರಾರು ಜನರು ಪಾಲ್ಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಪ್ರಯತ್ನಕ್ಕೆ ಕೈಜೋಡಿಸಲಿದ್ದಾರೆ.
ಡಾ.ಮುರುಗೇಶ್ ಪಿ.: 9739317408; ಕ್ರಿಯೇಟಿವ್ ಸ್ಟುಡಿಯೋಸ್ :8884408080 ನೋಂದಣಿಗಾಗಿ ಸಂಪರ್ಕಿಸಲು ಕೋರಲಾಗಿದೆ.

Comments