UK Suddi
The news is by your side.

ಯುವಕರು ಸ್ವಾಮಿ ವಿವೇಕಾನಂದರ ರಾಷ್ಟ್ರಪ್ರೇಮ ಅನುಕರಿಸಲಿ: ಬಸವಜಯ ಮೃತ್ಯುಂಜಯ ಸ್ವಾಮಿಜಿ

ಬೆಳಗಾವಿ: ವಿಶ್ವ ಕಂಡ ಅಗ್ರಮಾನ್ಯ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಲ್ಲಿದ್ದ ರಾಷ್ಟ್ರ ಪ್ರೇಮ,ಧರ್ಮಪ್ರೇಮಗಳನ್ನು ಇಂದಿನ ಯುವಕರು ಅನುಪಾಲಿಸಿ ಬಲಿಷ್ಠ ಭಾರತ ನಿರ್ಮಿಸಲು ಮುಂದಾಗಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು. ದೊಡವಾಡ  ಸಮೀಪದ ಬುಡರಕಟ್ಟಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ 2018ನೇ ಸ್ವಾಮಿ ವಿವೇಕಾನಂದ ಅವಾಡ್ರ್ಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಹಳಷ್ಟು ವರ್ಷಗಳ ಹಿಂದೆಯೇ ಸಮಾಜದಲ್ಲಿದ್ದ ಅನಿಷ್ಠ ಪದ್ದತಿ,ಆಚಾರಗಳ ವಿರುದ್ದ ಧ್ವನಿ ಎತ್ತಿದ ವಿವೇಕಾನಂದರು ತಮ್ಮ ಪ್ರಖರ ಭಾಷಣಗಳಿಂದ ವಿಶ್ವಮನ್ನಣೆ ಗಳಸಿದರು ಎಂದರು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಂದ ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಘೋಷಣೆ ತೂರಿ ಬಂದದ್ದನ್ನು ಕೇಳಿ ಹರ್ಷಿತರಾದ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕುರಿತಂತೆ ರಾಜ್ಯ ಸರಕಾರ ಶೀಘ್ರದಲ್ಲೆ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದು ನಾಡಿನ ಬಸವಾಭಿಮಾನಿಗಳಿಗೆ ಶುಭಸುದ್ದಿ ಬರಲಿದೆಯೆಂದರು.

ಬೈಲಹೊಂಗಲ ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮಿಜಿ ಅಭಿನವ ಸ್ವಾಮಿ ವಿವೇಕಾನಂದ ಪ್ರಶಸ್ತಿ, ಶಾಸಕ ಡಾ.ವಿಶ್ವನಾಥ ಪಾಟೀಲ ಸಮಾಜ ಸೇವಾ ರತ್ನ ಪ್ರಶಸ್ತಿ ,ಜಿಪಂ ಸದಸ್ಯೆ ರೋಹಿಣಿ ಪಾಟೀಲ ರಾಣಿ ಚನ್ನಮ್ಮ ಪ್ರಶಸ್ತಿ,ವೀರೇಶ ಹೊಳೆಪ್ಪನವರ ತಾಂತ್ರಿಕ ರತ್ನ ಪ್ರಶಸ್ತಿ,ಡಾ.ಸಿ ಬಿ ಗಣಾಚಾರಿ ಶಿಕ್ಷಣ ರತ್ನ ಪ್ರಶಸ್ತಿ, ಮಲ್ಲಿಕಾರ್ಜುನ ತಳವಾರ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸ್ಥಳೀಯ ಚಂದ್ರಶೇಖರ ಸ್ವಾಮಿಜಿ ನೇತೃತ್ವ ವಹಿಸಿದ್ದರು. ಲಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಪತ್ರಕರ್ತ ಈಶ್ವರ ಹೋಟಿ,ನಟ ರಮೇಶ ಪರವಿ ನಾಯ್ಕರ,ರಾಮನಗೌಡ ಪಾಟೀಲ,ಬಾಳಪ್ಪ ಶಿವಬಸನ್ನವರ ಉಪಸ್ಥಿತರಿದ್ದರು. ಮುಖಂಡರಾದ ಸಿದ್ದಾರೂಢ ಹೊಂಡಪ್ಪನವರ ನಿರೂಪಿಸಿದರು.ಅರವಿಂದ ಶಿವಬಸನ್ನವರ ವಂದಿಸಿದರು.ಮತ್ತಯ್ಯ ಪೂಜೇರ,ಬಸವರಾಜ ಶಿವಬಸನ್ನವರ,ಚಂಬಣ್ಣ ಬಶೆಟ್ಟಿ,ಈರಣ್ಣ ದುಂಡಕೊಪ್ಪ,ವೀರಭದ್ರಯ್ಯ ಹಿರೇಮಠ,ಮಹೇಶ ತಡಕೋಡ,ಪ್ರವೀಣ ಗಾಣಿಗೇರ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.

Comments