ಲಾಗ ತಿಪ್ಪರಲಾಗ
ಕಾಣೋದೆಲ್ಲ ಸತ್ಯವಲ್ಲ. ಸತ್ಯವೆಲ್ಲ ಕಾಣೋದಿಲ್ಲ, ಕಾಣೋದಿಲ್ಲ ಎಂದ ಮಾತ್ರಕ್ಕೆ ಸತ್ಯವಿಲ್ಲ ಎಂದರ್ಥವಿಲ್ಲ.
ಫೇಲಾದವರೆಲ್ಲ ದಡ್ಡರಲ್ಲ. ದಡ್ಡರೆಲ್ಲ ಫೇಲಾಗುವದಿಲ್ಲ.ಫೇಲಾದವರಿಗೆಲ್ಲ ದಡ್ಡರು ಎನ್ನಲು ಆಗುವದಿಲ್ಲ.
ಗೊತ್ತಿಲ್ಲದ್ದನ್ನು ಗೊತ್ತಿಲ್ಲದವರಿಗೆ ಗೊತ್ತಿದೆಯಾ? ಅಂತ ಕೇಳಿದಾಗ ಗೊತ್ತಿಲ್ಲವೆಂದಲೇ ಹೇಳುತ್ತಾರೆ. ಅದಕ್ಕೆ ಗೊತ್ತಿದ್ದವರಿಗೆ ಗೊತ್ತಿರುವದನ್ನು ಗೊತ್ತು ಮಾಡಿಕೊಡಿ ಎಂದರೆ ಗೊತ್ತಿದ್ದವರು ಗೊತ್ತಿಲ್ಲದವರಿಗೆ ಗೊತ್ತು ಮಾಡಿ ಕೊಡುತ್ತಾರೆ. ಗೊತ್ತಾಯ್ತಾ?
ದೊಡ್ಡವರ ದೊಡ್ಡ ದೊಡ್ಡ ತಪ್ಪುಗಳು ಸಣ್ಣವೆನಿಸಿಕೊಳ್ಳುತ್ತವೆ. ಸಣ್ಣವರ ಸಣ್ಣ ಸಣ್ಣ ತಪ್ಪುಗಳು ದೊಡ್ಡವೆನಿಸಿಕೊಳ್ಳುತ್ತವೆ ಇದೇಕೆ ಹೀಗೆ ಅಂತ ದೊಡ್ಡವರೆನಿಸಿಕೊಂಡ ದೊಡ್ಡ ದೊಡ್ಡವರಿಗೂ ಅರ್ಥವಾಗಿಲ್ಲ.
ಆ ರಾಮ ಈಗ ಇದ್ದಿದ್ದರೆ ಇರ್ತಿದ್ವಾ ಆರಾಮ? ಆ ರಾಮ ಈಗ ಇರದಿದ್ದರೂ ನಡಿತಿದೆ ಮನೆ ಮನೆಯಲ್ಲೂ ದಿನವೂ ರಾಮಾಯಣ. ಇನ್ನು ಆ ರಾಮ ಈಗಿದಿದ್ದರೆ ಕ್ಷಣ ಕ್ಷಣವೂ ನಡಿತಿತ್ತೇನೊ ರಾಮಾಯಣ!
ಬಡವನಿಗೆ ಮುರುಕಲು ಗುಡಿಸಲೆ ಮಹಡಿಯ ಮಹಲು. ಬಲ್ಲಿದನಿಗೆ ಮಹಡಿಯ ಮಹಲೆ ಮುರಕಲು ಗುಡಿಸಲು.
ಬಡವನಿಗೆ ನಗುವೆ ನಗವು. ಬಲ್ಲಿದನಿಗೆ ನಗವೇ ನಗುವು.. ಇದ ತಿಳಿದ ನಮಗೆ ಬಾರದೇ ಇರದು ನಗುವು !!