UK Suddi
The news is by your side.

ಅಭಿವೃದ್ದಿ ಕೆಲಸಗಳಿಗೆ ಜೆ ಡಿ ಎಸ್ ಬೆಂಬಲಿಸಿ:ಜೆ ಡಿ ಎಸ್ ಅಭ್ಯರ್ಥಿ ಶಂಕರ ಮಾಡಲಗಿ.

ಬೈಲಹೊಂಗಲ:ಮುಂಬರುವ ವಿಧಾನಸಭಾ ಚುನಾವಣೆ ಪ್ರಚಾರ ಮತ ಕ್ಷೇತ್ರದ ಕೆ.ಬಿ.ಪಟ್ಟಿಹಾಳ ಗ್ರಾಮದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಬೈಲಹೊಂಗಲ ವಿಧಾನಸಭಾ ಮತ ಕ್ಷೇತ್ರದ ಜೆ.ಡಿ.ಎಸ್. ಶಂಕರ್ ಮಾಡಲಗಿ ಕೆ.ಬಿ.ಪಟ್ಟಿಹಾಳ ಗ್ರಾಮಕ್ಕೆ ಭೇಟಿ ನೀಡಿ ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್ ಬೆಂಬಲಿಸುವಂತೆ ಪ್ರಚಾರ ಆರಂಭಿಸಿದರು.                                               

ಗ್ರಾಮದ ಪ್ರತಿ ಮನೆ ಮನೆಗೆ ಬೇಟಿ ನೀಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರ ಅವಧಿಯಲ್ಲಿ ರೈತರ ಕೃಷಿಸಾಲ ಮನ್ನಾ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕರ ಪತ್ರಗಳನ್ನು ನೀಡಿ ಜನರಿಗೆ ಮನವರಿಕೆ ಮಾಡಿದರು. 

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ರಮಜಾನ ನಧಾಪ,ರುದ್ರಪ್ಪ ಸವಟಗಿ ,ಅಶೋಕ ಕತ್ತಿ  ಸೋಮನಿಂಗ ವಾಡೆದ ,ಗಂಗಪ್ಪ  ಮುರಗೋಡ, ಅಜ್ಜಪ್ಪಾ ಕಾನನ್ನವರ, ಚಂದ್ರು ಹರಿಜನ ಇತರರು ಇದ್ದರು.

Comments