ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ.
ಮುಂಬಯಿ: ದುಬೈನಲ್ಲಿ ಹೃದಯಾಘಾತದಿಂದ ನಟಿ ಶ್ರೀದೇವಿಯವರು ಕೊನೆಯುಸಿರೆಳೆದಿದ್ದಾರೆ. ನಟಿ ಸಾವಿನ ಸುದ್ದಿ ಸಿನಿ ರಸಿಕರಲ್ಲಿ ಆಘಾತ ಮೂಡಿಸಿದ್ದು,ಇಡಿ ವಿಶ್ವವೇ ಕಂಬನಿ ಮಿಡಿದಿದೆ.
ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತಿ ಬೋನಿಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ದುಬೈಗೆ ಹೋದ ಸಂದರ್ಭದಲ್ಲಿ ಶ್ರೀದೇವಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಐದು ವರ್ಷವಿದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ್ದ ಶ್ರೀದೇವಿ, ಹಲವು ದಶಕಗಳ ಕಾಲ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು.ಸುಮಾರು 260ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದರು.ಶ್ರೀದೇವಿ ನಿಧನಕ್ಕೆ ಬಾಲಿವುಡ್ ಸೇರಿದಂತೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.