ನೀರಲ್ಲಿ ಮುಳುಗಿ ನಟಿ ಶ್ರೀದೇವಿ ಸಾವು
ದುಬೈ: ಬಾಲಿವುಡ್ ನಟಿ ಶ್ರೀದೇವಿ ಅವರ ಅಚ್ಚರಿಯ ಸಾವಿನ ಕುರಿತಾದ ಮರಣೋತ್ತರ ವರದಿಯ ಪ್ರಕಾರ ಆಕೆ ಸತ್ತದ್ದು ಬಾತ್ ಟಬ್ನಲ್ಲಿ ಆಕಸ್ಮಿಕವಾಗಿ ಮುಳುಗಿ ಎಂದು ಯುಎಇ ಗಲ್ಫ್ ನ್ಯೂಸ್ ವರದಿ ಮಾಡಿದೆ.
ನಟಿ ಶ್ರೀದೇವಿಯ ದೇಹದಲ್ಲಿ ಆಲ್ಕೋಹಾಲ್ ಇದ್ದುದು ಕೂಡ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಯುಎಇ ಗಲ್ಫ್ ನ್ಯೂಸ್ ಹೇಳಿದೆ.
ನಟಿ ಶ್ರೀದೇವಿ ಅವರ ಸಾವು ಹೃದಯ ಸ್ತಂಭನದಿಂದ ಆಯಿತೆಂದು ಈ ಮೊದಲಿನ ವರದಿಗಳು ತಿಳಿಸಿದ್ದವು. ಆದರೆ ಈಗ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ಕುರಿತಾಗಿ ತದ್ವಿರುದ್ಧ ವರದಿಗಳು ಬಂದಿರುವುದು ಆಕೆಯ ಕುಟುಂಬದವರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಅತ್ಯಂತ ಆಘಾತಕಾರಿಯಾಗಿದೆ.
ನಟಿ ಶ್ರೀದೇವಿ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶ ಇಲ್ಲ ಎಂದು ಫೊರೆನ್ಸಿಕ್ ವರದಿ ಹೇಳಿರುವುದಾಗಿ ಯುಎಇ ಗಲ್ಫ್ ನ್ಯೂಸ್ ವರದಿ ಮಾಡಿದೆ.