UK Suddi
The news is by your side.

ಮುದ್ದೆಬಿಹಾಳ: ಯಡಿಯೂರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಪೂಜೆ

ಮುದ್ದೆಬಿಹಾಳ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರ 75 ನೇ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು.

ಅವರಿಗೆ ಧೀರ್ಘ ಆಯಸ್ಸು ಆರೋಗ್ಯ ಮತ್ತು ಕರ್ನಾಟಕದ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಲಿ ಅಂತ ಮುದ್ದೆಬಿಹಾಳದ ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಶಿವಯೊಗಪ್ಪ ರಾಂಪೂರವರವರು ಮತ್ತು ಎಲ್ಲಾ ಬಾ.ಜ.ಪ ನಾಯಕರು ಹಾಗೂ ಕಾರ್ಯಕರ್ತ ಬಂದುಗಳನ್ನು ಕರೆದುಕೊಂಡು ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ದೇವಿ ಶ್ರೀ ದುರ್ಗಾದೇವಿ ಶ್ರೀ ಶಾರದಾ ದೇವಿ ಉಡಿ ತುಂಬಿ ಹಾಗೂ ಸರ್ವವಿಗ್ನಗಳು ದೂರಾಗಲಿ ಎಂದು ಪ್ರಾರ್ಥಿಸಿದರು.

ನಂತರ ಗಣ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗಣ ಹೋಮದಲ್ಲಿ ಶ್ರೀಮತಿ ಕಾಶಿಬಾಯಿ ರಾಂಪುರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು,ಪದಾಧಿಕಾರಿಗಳು,ಕಾರ್ಯಕರ್ತರು ಪಾಲ್ಗೊಂಡಿದ್ದರು.

Comments