UK Suddi
The news is by your side.

ಚುನಾವಣೆಗೆ ಸ್ಪರ್ದಿಸದಂತೆ ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಜೀವ ಬೆದರಿಕೆ.

ವಿಜಯಪುರ : ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಗೌಡ ಪಾಟೀಲರ ವಾಹನ ಅಡ್ಡಗಟ್ಟಿ ಆರು ಮುಸುಕುದಾರಿಗಳು ಜೀವ ಬೆದರಿಕೆ ಹಾಕಿರುವ ಘಟನೆ ನಗರದ ರೇಡಿಯೋ ಮೈದಾನದ ಬಳಿ ಮಂಗಳವಾರ ನಡೆದಿದೆ.
ಮತಕ್ಷೇತ್ರ ವ್ಯಾಪ್ತಿಯ ಹೊನವಾಡಕ್ಕೆ ವಿಜಯಗೌಡ ಪಾಟೀಲ್ ಹೊರಟಿದ್ದರು. ಅದೇ ವೇಳೆ ಮುಸುಕುದಾರಿಗಳು ರೇಡಿಯೋ ಮೈದಾನ ಬಳಿ ಬೈಕ್ ಮೂಲಕ ಬಂದು ವಾಹನ ಅಡ್ಡಗಟ್ಟಿ ನಿಂತು. ನೀನು ಚುನಾವಣೆಗೆ ನಿಲ್ಲಬೇಡ, ನಿಂತರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ವಿಜಯಗೌಡ ನೇರವಾಗಿ ಗಾಂಧಿವೃತ್ತ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Comments