ನಟಿ ಶ್ರೀದೇವಿಗೆ ಅಂತಿಮ ವಿಧಾಯ
ಮುಂಬೈ: ಬದುಕಿನ ಪಯಣ ಮುಗಿಸಿದ ಬಾಲಿವುಡ್ ಸೂಪರ್ ಸ್ಟಾರ್, ಪದ್ಮಶ್ರೀ ವಿಜೇತೆ ಶ್ರೀದೇವಿಯವರ ಅಂತ್ಯ ಸಂಸ್ಕಾರ ವಿಲೆ ಪಾರ್ಲೆ ಸೇವಾ ಸಮಾಜದ ಚಿತಾಗಾರದಲ್ಲಿ ಬುಧವಾರ ಸಂಜೆ ನಡೆಯಿತು.
ಪತಿ ಬೋನಿ ಕಪೂರ್ 5.20ರ ಸುಮಾರಿಗೆ ಪಾರ್ಥೀವ ಶರೀರಕ್ಕೆ ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ನಟಿಗೆ ಅಂತಿಮ ವಿದಾಯ ಹೇಳಲಾಯಿತು.
54 ವರ್ಷದ ಶ್ರೀದೇವಿ ಅವರ ಕೊನೆ ಆಸೆಯಂತೆ ಕೆಂಪು ಮತ್ತು ಚಿನ್ನದ ಬಣ್ಣದ ಕಾಂಚಿವರಂ ಸೀರೆಯನ್ನುಡಿಸಿ ಶೃಂಗಾರ ಮಾಡಲಾಗಿತ್ತು. ತ್ರಿವರ್ಣದಲ್ಲಿ ಅಲಂಕರಿಸಿದ್ದ ವಾಹನದಲ್ಲಿ ಶ್ರೀದೇವಿ ಪಾರ್ಥೀವ ಶರೀರವನ್ನು ರುದ್ರಭೂಮಿಗೆ ಸಾಗಿಸಲಾಯಿತು. ಈ ವೇಳೆ ಮಗ ಅರ್ಜುನ್ ಕಪೂರ್ ಮತ್ತು ಸೋದರಳಿಯ ಮೋಹಿತ್ ಮರ್ವಾ ಅವರಿದ್ದರು.