UK Suddi
The news is by your side.

ನೀನು ಮೌನವಾಗುವ ಮುನ್ನ .

ಲೇಖಕರು:ಶಶಿಕಾಂತ ಪಟ್ಟಣ-ಪುಣೆ

ನೀನು ಮೌನವಾಗುವ ಮುನ್ನ
ನನ್ನನ್ನೊಮ್ಮೆ ಕೇಳಬೇಕಿತ್ತು ಗೆಳತಿ.

ದೂರ ಸರೆಯುವ ಮುನ್ನ

ದಾರಿಯುದ್ದಕ್ಕೂ ನಡೆದ

ಹೆಜ್ಜೆಗಳ ಲೆಕ್ಕ ಕೊಡಬೇಕಿತ್ತು .

ಹಾದಿಯಲಿ ಹಾಡಿದ ಕವನ

ಕಟ್ಟಿದ ಕಥೆಗಳೊಮ್ಮೆ ಕೇಳಬೇಕಿತ್ತು.

ಫೋನ್ ಮೇಲ್ ಸಂದೇಶಗಳ

ನಗೆ ಸಂತಸ ಪ್ರೀತಿಯ ಬಟ್ಟೆಗೆ

ನೀರೆರದು ದೂರವಾಗಿದ್ದು ಏತಕ್ಕೆ?

ಹುಟ್ಟು ಹಬ್ಬದ ನೆನಪು

ಸ್ನೇಹ ಕೂಟದ ಒನಪು

ಕಾಡಲಿಲ್ಲವೇ ನಿನ್ನ ಮನವನೊಮ್ಮೆಯೂ.

ನಿನ್ನ ನನ್ನ ಮಧ್ಯೆ

ಹುಟ್ಟಿದವು ಕವನಗಳು .

ನಿನಗಿನ್ನೂ ಏನೇನೊ ಹೇಳಬೇಕ್ಕೆನ್ನುವ

ನನ್ನ ಮಧುರ ಭಾವಗಳು

ಅಳುತಿವೆ ಭಿಕ್ಕಿ ಭಿಕ್ಕಿ .     

ಉತ್ತರ ಕೊಡಲಿಲ್ಲ .

ನನ್ನ ಮಧುರ ಭಾವಗಳಿಗೆ

ಕವನಗಳಿಗೆ ಸಂದೇಶಗಳಿಗೆ.

ಭಾವ ಭದ್ರತೆಯ ಕೋಟೆ ಕಟ್ಟಿ

ಒಲುಮೆಯ ಕುಲುಮೆಯಾದವಳು.

ಏನೂ ಹೇಳದೆ ಒಳಗೊಳಗೆ ಶಾಂತವಾದೆ.

ಮೌನಕ್ಕೆ ಜಾರಿದೆ ಸುಮ್ಮನೆ .

Comments