UK Suddi
The news is by your side.

ಮರ ಕಡಿದು ಇಂದಿರಾ ಕ್ಯಾಂಟೀನ್ ನಿರ್ಮಿಸಲು ಹೊರಟ ಸರ್ಕಾರದ ವಿರುದ್ದ ಪ್ರತಿಭಟನೆ.

ವಿಜಯಪುರ:ವಿಜಯಪೂರದ ಐಟಿಐ ಕಾಲೇಜಿನ ಎದುರಿನ ಮರ ಕಡಿದು ಅಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಹೊರಟ ಸರ್ಕಾರದ ವಿರುದ್ಧ ಅದೇ ಸ್ಥಳದಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ಮಾಡಲಾಯಿತು. 

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರಿಗೆ ಘೇರಾವ್ ಹಾಕಲಾಯಿತು.ನಂತರದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಇಂದಿರಾ ಕ್ಯಾಂಟೀನ್ ಅನ‌್ನು ಕಾಲೇಜಿನ ಹಿಂದಿನ ಖಾಲಿ ಜಾಗೆಯಲ್ಲಿ ಮಾಡಿ ಎಂದು ಮನವಿ ಸಲ್ಲಿಸಲಾಯಿತು.

ನ್ಯಾಯ ಕೇಳಿದ ABVP ಕಾರ್ಯಕರ್ತರಿಗೆ ಕೇಸು ಹಾಕುವ ಬೆದರಿಕೆ ಒಡ್ಡಿದ ಪಾಲಿಕೆ ಆಯುಕ್ತರ ವಿರುದ್ಧವೂ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Comments