UK Suddi
The news is by your side.

ರಬಕವಿ ಬನಹಟ್ಟಿ: ದ್ವೇಷ ರಾಜಕೀಯ ಖಂಡಿಸಿ ನಗರಸಭೆಗೆ ಸಿದ್ದು ಸವದಿ ಮುತ್ತಿಗೆ

ರಬಕವಿ-ಬನಹಟ್ಟಿ: ಬಿಜೆಪಿ ಚುನಾಯಿತ ರಬಕವಿ ಬನಹಟ್ಟಿ ನಗರಸಭಾ ಸದಸ್ಯರ ಮೇಲೆ ನಡಿಯುತ್ತಿರುವ ಧ್ವೇಷ ರಾಜಕೀಯ ವಿರುಧ್ಧ ಮಾಜಿ ಶಾಸಕ ಸಿದ್ದು ಸವದಿ, ನಗರಸಭಾ ಸದಸ್ಯರು, ಕಾರ್ಯಕರ್ತರು ಇಂದು ರಬಕವಿ ಬನಹಟ್ಟಿ ನಗರ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಬಿಜೆಪಿ ಚುನಾಯಿತ ಸದಸ್ಯರನ್ನು ಆಹ್ವಾನಿಸಲಾಗುತ್ತಿಲ್ಲ ಎಂದು ಮಾಜಿ ಶಾಸಕ ಸಿದ್ದು ಸವದಿ ಆರೋಪಿಸಿದರು.

ಪ್ರದಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಸಿಗಬೇಕ್ಕಗಿದ್ದ ಆಶ್ರಯ ಮನೆಗಳ ಹಕ್ಕನ್ನು ಕಸಿದುಕೊಂಡಿದ್ದಿರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಗರಸಭೆ ಅಧಿಕಾರಿಗಳ ಮೇಲೆ ನನಗೆ ಗೌರವವಿದೆ, ಅಧಿಕಾರಿಗಳು ರಾಜಕೀಯ ವ್ಯಕ್ತಿಗಳಿಗೆ ಹೆದರುವುದನ್ನು ನಿಲ್ಲಿಸಿ ಕಾನೂನನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕೆಂದು ಅವರು ಹೇಳಿದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.

Comments