UK Suddi
The news is by your side.

ಬಹುಸಂಖ್ಯಾತ ಕೋಮುವಾದ ಹಾಗೂ ಕಾರ್ಪೋರೇಟ್ ಹಿತಾಸಕ್ತಿಗಳು ಅಧಿಕಾರಕ್ಕೆ ಬರಲು ಬಿಡುವುದಿಲ್ಲ

ಧಾರವಾಡ: ಬಹುಸಂಖ್ಯಾತ ಕೋಮುವಾದ ಹಾಗೂ ಕಾರ್ಪೋರೇಟ್ ಹಿತಾಸಕ್ತಿಗಳ ಅಕ್ರಮ ಕೂಟವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಡುವುದಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ವಿರೋಧಿ ರಾಜಕೀಯ ಶಕ್ತಿಗಳು ಇಂದು ದೇಶವನ್ನು ಆಳುತ್ತಿವೆ. ಈ ಶಕ್ತಿಯ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಕಾರ್ಪೋರೇಟ್ ಪರ ಆರ್ಥಿಕ ನೀತಿಗಳಿಂದ ದೇಶದ 90 ಪ್ರತಿಶತ ಜನ ಭಾದಿತರಾಗಿದ್ದಾರೆ. ಜನವಿರೋಧಿ ತತ್ವಗಳ ಮುಲೋತ್ಪಾಟನೆ ಮಾಡಲು ಪರ್ಯಾಯ ಹಾಗೂ ಕ್ರಾಂತಿಕಾರಿ ರಾಜಕೀಯ ವಾತಾವರಣ ಸೃಷ್ಠಿ ಮಾಡುವ ನಿಟ್ಟಿನಲ್ಲಿ ಜನಾಂದೋಲನಗಳ ಮಹಾಮೃತ್ರಿ ಕರ್ನಾಟಕ ಕೆಲಸ ಮಾಡುತ್ತಿದೆ ಎಂದರು.

ಐ.ಜಿ. ಪುಲ್ಲಿ, ಹುರುಗಲವಾಡಿ ರಾಮಯ್ಯ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Comments