UK Suddi
The news is by your side.

ನಮೋ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಕೊಪ್ಪಳ : ಪ್ರಧಾನಿ ಮೋದಿಯ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ಮೋದಿ ಅವರು ತಮ್ಮ ಹುದ್ದೆ ಮರೆತು ಕೀಳು ಮಟ್ಟದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಕೊಪ್ಪಳ ಸಮೀಪದ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೋದಿಯವರು ನಮ್ಮನ್ನು ಸೀದಾ ರೂಪಾಯಿ ಸರ್ಕಾರ ಎನ್ನುತ್ತಿದ್ದಾರೆ. ಇಷ್ಟು ಕೀಳು ಮಟ್ಟದ ರಾಜಕೀಯ ಮೋದಿ ಮಾಡಬಾರದು ಎಂದರು.

ರೈತರನ್ನು ಕೊಂದವರಿಗೆ ಮೋದಿ ರೈತ ಬಂಧು ಅಂತಾ ಬಿರುದು ಕೋಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್‌ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಮೋದಿಗೆ ಪ್ರಶ್ನೆ ಮಾಡಿದ್ರು.. ನಮ್ಮ ಸರ್ಕಾರದ ಭ್ರಷ್ಟ್ರಚಾರದ ಬಗ್ಗೆ ಮೋದಿ ಮಾತನಾಡ್ತಾರೆ, ಮೊದಲು ಅವರು ದೇಶವನ್ನು ಲೂಟಿ ಹೊಡೆದ ನೀರವ್‌ ಮೋದಿ, ಲಲಿತಾ ಮೋದಿಯನ್ನು ಯಾಕೆ ಸುಮ್ನೆ ಬಿಟ್ರು. ಅಲ್ಲದೆ ಇವರೇಲ್ಲಾರೂ ದೇಶ ಬಿಟ್ಟು ಹೋಗಲು ಮೋದಿಯೇ ಕುಮ್ಮಕ್ಕು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌ ಮಾಡಿದ ಹಾಗೂ ಸಾಲ ಮನ್ನಾ ಮಾಡಲು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಹೇಳುತ್ತಿದ್ದ ಬಿ.ಎಸ್‌.ಯಡಿಯೂರಪ್ಪ ‘ರೈತ ಬಂಧು’ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದ ಅವರು ರೈತರನ್ನು ಕೊಂದವರಿಗೆ ಮೋದಿ ರೈತ ಬಂಧು ಅಂತಾ ಬಿರುದು ಕೊಡಲು ರಾಜ್ಯಕ್ಕೆ ಬರುತ್ತಾರೆ, ರೈತರ ಹೆಸರಲ್ಲಿ ಹೊಸ ನಾಟಕ ಸುರುವಿಟ್ಟುಕೊಂಡಿದ್ದಾರೆ. ಮಾ.1 ರಂದು ಬಿಜೆಪಿ ಆರಂಬಿಸುವ ಲೆಕ್ಕ ಕೋಡಿ ಎಂಬ ಅಭಿಯಾನ ಕುರಿತು ಮಾತನಾಡಿದ ಅವರು, ಅಸಂಬ್ಲಿ ಇರೋದೇ ಲೆಕ್ಕ ಕೋಡುವುದಕ್ಕಾಗಿ ಆದರೆ ‘ನಾವು ಅಮಿತ್‌ ಶಾಗೆ ಲೆಕ್ಕ ಕೊಡಬೇಕಾಗಿಲ್ಲ. ಬಜೆಟ್‌ ಮಂಡಿಸಿ ರಾಜ್ಯದ ಜನರಿಗೆ ಲೆಕ್ಕ ಕೊಟ್ಟಿದ್ದೇವೆ’ ಎಂದು ಹೇಳಿದರು. 

ಕಾಂಗ್ರೆಸ್ಸ್ ಬಿಜೆಪಿ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುವುದರಲ್ಲಿಯೇ ಕಾಲ ಕಳೆದು ರೈತರನ್ನು ಕಡೆಗಣಿಸಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆಯಿಸಿದ ಅವರು, ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ, ದೇವೇಗೌಡ ಏನೂ ಮಾಡಿಲ್ಲ. ಆದರೆ ಅಧಿಕಾರಕ್ಕಾಗಿ ಈಗ ಮಾಡುತ್ತೇನೆ ಎಂದರೆ ಜನರು ನಂಬುತ್ತಾರಾ? ಇವರ ಮಾತನ್ನ ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ನೀರಾವರಿ ಸಚಿವ ಎಂ. ಬಿ. ಪಾಟೀಲ್‌, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ, ಮಾಜಿ ಶಾಸಕ ಅಮರೇಗೌಡ ಪಾಟೀಲ, ಮುಖಂಡರಾದ ಕಾಟನ್‌ ಪಾಶಾ, ಶಾಂತಣ್ಣ ಮುದಗಲ್‌ ಇತರರು ಇದ್ದರು.

Comments