UK Suddi
The news is by your side.

ಬೆಳಗಾವಿ: ಪತ್ರಕರ್ತರನ್ನು ಹೊರಗೆ ತಳ್ಳಿದ ಪೊಲೀಸರು.

ಬೆಳಗಾವಿ: ನಗರದ ಆಟೋನಗರದಲ್ಲಿರುವ ಅನಧಿಕೃತ ಕಸಾಯಿ ಖಾನೆಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಭೇಟಿ ನೀಡಿದಾಗ ಸುದ್ದಿ ಮಾಡಲು ತೆರಳಿದ ಪತ್ರಕರ್ತರನ್ನು ಕಸಾಯಿ ಖಾನೆಯಿಂದ ಪೊಲೀಸ್ ಅಧಿಕಾರಿಗಳು ಹೊರ ತಳ್ಳಿರುವ ಘಟನೆ ಗುರುವಾರ ನಡೆದಿದೆ.

ಹತ್ತಾರು ಪತ್ರಕರ್ತರು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಭೇಟಿ ನೀಡಿರುವ ಸಂದರ್ಭದಲ್ಲಿ ಕಸಾಯಿ ಖಾನೆ ಒಳಗಡೆ ತೆರಳಿದ್ದರು. ಕೆಲ ಸಮಯದ ನಂತರ ಕಸಾಯಿ ಖಾನೆಯ ಒಳಗಡೆ ಬಂದ ಪೊಲೀಸ ಹಿರಿಯ ಅಧಿಕಾರಿಯೊಬ್ಬರು ಕರ್ತವ್ಯ ನಿರಂತ ಪೊಲೀಸರಿಗೆ ಎನಪ್ಪ ಯಾವ ಸೀಮೆ ಆಫೀಸರ್ ನೀವು ಪತ್ರಕರ್ತರನ್ನು ಒಳಗಡೆ ಬಿಟ್ಟಿದ್ದು ಅಂತಾ ಪ್ರಶ್ನಿಸಿ ಪತ್ರಕರ್ತರನ್ನು ಹೊರಗಡೆ ಕಳುಹಿಸಿ ಎಂದು ಸೂಚನೆ ನೀಡುತ್ತಿದಂತೆ ಪೊಲೀಸ್ ಸಿಬ್ಬಂದಿಗಳು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಹಿಡಿದು ಕಸಾಯಿ ಖಾನೆಯ ಪ್ರವೇಶಧ್ವಾರದಿಂದ ಹೊರಗೆ ತಳ್ಳಿದರು.

ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ ಸೇರಿದಂತೆ ಅನೇಕರು ಅರ್ಧ ಗಂಟೆವರೆಗೂ ಪ್ರವೇಶ ಧ್ವಾರದ ಮುಂದೆ ಕಾಯ್ದರು ಒಳಗಡೆ ಬಿಡದ ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವೆ ಮೇನಕಾ ಗಾಂಧಿ ಬಂದ ನಂತರ ಪೊಲೀಸರ ಮಾತಿಗೆ ಕಿವಿಗೂಡದೆ ಬಿಜೆಪಿ ನಾಯಕರುಗಳು ಒಳಗಡೆ ಪ್ರವೇಶಿಸಿದ ಘಟನೆ ನಡೆಯಿತು.

ಅಧಿಕಾರಿಗಳ ತಲೆದಂಡ:

ಅನಧಿಕೃತ ಕಸಾಯಿ ಖಾನೆಗಳ ಕುರಿತು ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಯಲ್ಲಿ ಇಬ್ಬರು ಅಧಿಕಾರಿಗಳ ತಲೆ ದಂಡಾಗುವುದು ಎನ್ನಲಾಗುತ್ತಿದೆ.

ಬೆಳಗಾವಿ ಮಹಾನಗರದಲ್ಲಿನ ಅನಧಿಕೃತ ಕಸಾಯಿ ಖಾನೆಗಳ ಹಾಗೂ ಅಕ್ರಮ ಬಾಂಗ್ಲಾ ವಾಸಿಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಪೊಲೀಸ್ ಮಹಾನಿರ್ದೇಶಕರಿಂದ ಮಾಹಿತಿ ತೆಗೆದುಕೊಂಡು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಆಟೋ ನಗರದಲ್ಲಿನ ಅನಧಿಕೃತ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳದೆ, ಅನಧಿಕೃತ ಕಸಾಯಿ ಖಾನೆಗಳ ವಿರುದ್ಧ ಪ್ರಕರಣ ದಾಖಲಿಸಿರುವ ವಕೀಲರೊಬ್ಬರಿಗೆ ಮಾತನಾಡಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳು ಮಾಹಿತಿ ರವಾನಿಸಿವೆ. ಗುಪ್ತಚರ ಇಲಾಖೆಯ ಮಾಹಿತಿ ಮೆರೆಗೆ ಹಾಗೂ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಹಾಗೂ ಹಿರಿಯ ಎಸಿಪಿ ಅವರು ಸೇರಿದಂತೆ ಎರಡು ಪೇದೆಗಳ ಮೇಲೆ ಕ್ರಮ ಕೈಗೊಳ್ಳುವ ಸಂಭವವಿದೆ? ಎಂದು ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಮಾತುಗಳು ಆರಂಭವಾಗಿವೆ.

Comments