UK Suddi
The news is by your side.

ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಲು ಭಾಜಪ ಜಿಲ್ಲಾಧ್ಯಕ್ಷ ಸಿದ್ದು ಸವದಿ ಕರೆ.

ರಬಕವಿ-ಬನಹಟ್ಟಿ:ರೋಗಿಗಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಔಷಧ ಒದಗಿಸುವ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರದ ಘಟಕವನ್ನು ನಗರದ ನಗರಸಭೆ ಮಳಿಗೆಯಲ್ಲಿ ಆರಂಭಿಸಿರುವ ಜನ ಔಷಧ ಕೇಂದ್ರವನ್ನು ಇಂದು ಭಾಜಪ ಜಿಲ್ಲಾಧ್ಯಕ್ಷ ಸಿದ್ದು ಸವದಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ವಿಶೇಷ ಆಸಕ್ತಿಯಿಂದ ದೇಶಾದ್ಯಂತ ಸುಮಾರು 3000 ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳು ಪ್ರಾರಂಭವಾಗಿವೆ.

ದೇಶದಲ್ಲಿ ಇರುವ ಎಲ್ಲ ವೈದ್ಯರು ಜನ ಔಷಧಿಯನ್ನೇ ಶಿಫಾರಸು ಮಾಡುವಂತಹ ಕಾನೂನು ತರಬೇಕೆಂಬ ಆಲೋಚನೆಯಲ್ಲಿ ಕೇಂದ್ರ ಸರಕಾರವಿದೆ ಎಂದು ಹೇಳಿದರು.
ಜನ ಔಷಧಿಯಲ್ಲಿ ಸಿಗುವ ಎಲ್ಲ ಔಷಧಿಗಳ ಗುಣಮಟ್ಟದಲ್ಲಿ ಏನು ಕಡಿಮೆ ಇಲ್ಲ. ಮೆಡಿಕಲ್‌ಗಳಲ್ಲಿ 100 ರೂ.ಗೆ ಸಿಗುವ ಔಷಧಿ ಜನ ಔಷಧ ಕೇಂದ್ರದಲ್ಲಿ ಕೇವಲ 18ರಿಂದ 20 ರೂ.ಗೆ ಸಿಗಲಿದೆ. ಕ್ಯಾನ್ಸರ್‌, ಮಾನಸಿಕ ತೊಂದರೆ, ಎಚ್‌ಐವಿ ಹಾಗೂ ಬಿಪಿ, ಮಧುಮೇಹ, ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ಅತಿ ಕಡಿಮೆ ದರದಲ್ಲಿ ಔಷಧಿಯೂ ಸಿಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀಮಶಿ ಮಗದುಮ, ಸುರೇಶ ಚಿಂಡಕ, ರುದ್ರಪ್ಪಾ ಆಲಗೂರ, ಕುಮಾರ ಕದಮ,ಹೂಲಿ ಸರ್, ಬಸಯ್ಯ ಹಿರೇಮಠ, ಅಶೋಕ ಕಲಬುರ್ಗಿ, ದುಂಡಪ್ಪಾ ಮಾಚಕನೂರ, ನಂದು ಗಾಯಕವಾಡ ,ಶ್ರೀಶೈಲ ಯಾದವಾಡ,ರವಿ ಕರಲಟ್ಟಿ, ಪರಸಪ್ಪ ಜಿಡ್ಡಿಮನಿ, ಯಲ್ಲಪ್ಪಾ ಕಟಗಿ ಹಾಗೂ ಕಾರ್ಯಕರ್ತರು ಭಾಗವಹಿಸಿದರು.

Comments