UK Suddi
The news is by your side.

ಮಹದಾಯಿ:ಹುಬ್ಬಳ್ಳಿ ತಲುಪಿದ ವೈದ್ಯರ ಪಾದಯಾತ್ರೆ.

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರಿನಿಂದ ನರಗುಂದದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಭಾನುವಾರ ಹುಬ್ಬಳ್ಳಿ ತಲುಪಿತು.

ಭಾರತಿಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ರವೀಂದ್ರ ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂದು ಬಂದು ತಲುಪಿತು.

ಐಎಂಎ ಹುಬ್ಬಳ್ಳಿ ಘಟಕ ಅಧ್ಯಕ್ಷ ಜಿ.ಬಿ.ಸತ್ತೂರ, ಹಿರಿಯ ವೈದ್ಯ ವಿ.ಬಿ.ನಿಟಾಲಿ ಸೇರಿದಂತೆ ಸದಸ್ಯರು ಸ್ವಾಗತ ಕೋರಿದರು.
ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಗುರುರಾಯನಗೌಡ, ಸಮೀರ್ ಆಚಾರ್ಯ, ವಿಕಾಸ ಸೊಪ್ಪಿನ ಇದ್ದರು.

ಮಾರ್ಚ್ 7ರಂದು ಪಾದಯಾತ್ರೆ ನರಗುಂದ ತಲುಪಲಿದ್ದು ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

Comments