UK Suddi
The news is by your side.

ಕಳಚಿತು ಧಾರವಾಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ

ಧಾರವಾಡ: ಇಲ್ಲಿನ ಪ್ರತಿಷ್ಟಿತ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಹಾಗೂ ಹಿರಿಯ ಸಾಹಿತಿ ಡಾ.ಶಿವಾನಂದ ಗಾಳಿ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.

ಸದಾ ಹಸನ್ಮುಖಿ, ಶ್ರಮಜೀವಿ ಹಾಗೂ ಹಿರಿಯ. ಕಿರಿಯರನ್ನು ಪ್ರೀತಿ ಗೌರವದಿಂದ ಕಾಣುತ್ತಿದ್ದ ಅವರು ಎಲ್ಲರಿಗೂ ನೆಚ್ಚಿನ ಗುರುಗಳಾಗಿದ್ದರು. ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿರುವ ಅವರು ಧಾರವಾಡದ ಜೆಎಸ್ಎಸ್ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಆಡಳಿತ ಮಂಡಳಿ ಸದಸ್ಯರಾಗಿ, ಜೈನ ಅಧ್ಯಯನ ಪೀಠದ ರೂವಾರಿಗಳಾಗಿ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಸುಂದರ ಪುಸ್ತಕ ಪ್ರಕಾಶನದ ಮೂಲಕ ಅನೇಕ ವಿದ್ವಾಂಸರ, ನಾಡಿನ ಶ್ರೇಷ್ಠ ಸಾಹಿತಿಗಳ ಸಾಧನೆಗಳನ್ನು ಹೊರತಂದಿದ್ದ ಅವರು ಅಭಿನಂದನಾ ಗ್ರಂಥ ಪ್ರಕಟಿಸುವ, ವಿಚಾರ ಸಂಕೀರ್ಣ ಏರ್ಪಡಿಸುವ ಮೂಲಕ ತಮ್ಮನ್ನು ತಾವು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು. ಧಾರವಾಡದ ಹಿರಿಯ ಸಾಹಿತಿಗಳಾದ ಡಾ.ಎಂ.ಎಂ. ಕಲಬುರ್ಗಿ, ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಗುರುಲಿಂಗ ಕಾಪಸೆ, ಮಾಲತಿ ಪಟ್ಟಣಶೆಟ್ಟಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಸೋಮಶೇಖರ ಇಮ್ರಾಪುರ, ವೀಣಾ ಶಾಂತೇಶ್ವರ ಸೇರಿದಂತೆ ಅನೇಕರ ಸಾಹಿತ್ಯ ಸೇವೆಯನ್ನು ನಾಡಿಗೆ ಡಾ.ಶಿವಾನಂದ ಗಾಳಿ ಅವರು ಪರಿಚಯಿಸಿದ್ದಾರೆ. ಗಾಳಿ ಶಿವಣ್ಣ ಎಂದೇ ಬಹುತೇಕರಿಗೆ ಚಿರಪರಿಚಿತರಾಗಿದ್ದ ಅವರು ಅಗಲಿಕೆಗೆ ಕನ್ನಡ ಸಾಹಿತ್ಯ ಲೋಕದ ಅನೇಕ ದಿಗ್ಗಜರು, ಶಿಷ್ಯಂದಿರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Comments