UK Suddi
The news is by your side.

ಸಾಹಿತ್ಯಕ್ಕೆ ಯುವಕರ ಕೊಡುಗೆ ಇಂದು ಅಪಾರವಾಗಿದೆ:ಸಾಹಿತಿ  ಶ್ರೀಧರ್ ಆಸಂಗಿಹಾಳ

ಸಿಂದಗಿ:ಸಾಹಿತ್ಯ ಯಾರ ಸ್ವತ್ತಲ್ಲ ಅದು ಎಲ್ಲರ ಹಕ್ಕು.ಇಂದಿನ ಯುವಜನಾಂಗ ಸಾಹಿತ್ಯದತ್ತ ಮುಖ ಮಾಡಿದ್ದು ಉತ್ತಮ ಬೆಳವಣಿಗೆಯಾಗಿದೆ.ಮಲ್ಲಿಕಾರ್ಜುನ ಧರಿ ಅವರ ಅಂತರಂಗದ  ಬೃಂದಾವನ ಕೃತಿಯು ಸಮಾಜಕ್ಕೆ ದಿವ್ಯೌಷಧಿಯಾಗಿದೆ.ತಮ್ಮ ನುಣುಪಾದ ಬರಹದ ಮೂಲಕ ಸಮಾಜವನ್ನು ಚಿಂತನೆಗೆ ದೂಡಿದ್ದಾರೆ.ಸಾಹಿತ್ಯವನ್ನು ಎಲ್ಲರು ಅಪ್ಪಿಕೊಂಡು ಕನ್ನಡ ನಾಡು ನುಡಿಯ ಉಳಿವಿಗೆ ಹೋರಾಡಬೇಕಿದೆ ಎಂದು ಸಾಹಿತಿಗಳಾದ ಶ್ರೀಧರ್ ಆಸಂಗಿಹಾಳ ಪುಸ್ತಕ ಪರಿಚಯ ಸಂದರ್ಭದಲ್ಲಿ ಮಾತನಾಡಿದರು.ಕೃತಿ ಪರಿಚಯಿಸಿ ಸಾಹಿತ್ಯದ ಚಿಂತನೆಗಳ ಕುರಿತು ಯುವಕರಿಗೆ ಕಿವಿಮಾತುಗಳನ್ನು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಂದಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ಧಲಿಂಗ ಚೌದರಿ ಅವರು ಮಾತನಾಡಿ ಸಾಹಿತ್ಯವನ್ನು ಎಲ್ಲರೂ ಅನುಭವಿಸೋಣ ಅದರ ಉಳಿವಿಗಾಗಿ ನಿರಂತರ ಪ್ರಯತ್ನಿಸೋಣ ಎಂದರು.ಹಿರಿಯ ಸಾಹಿತಿ ನಾಡಗೌಡರು ಕೃತಿ ಬಿಡುಗಡೆ ಮಾಡಿದರು.

ಬೋರಗಿ ಪುರದಾಳ ವಿಶ್ವಾರಾಧ್ಯಮಠದ ಶ್ರೀಗಳು ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ನಂದೀಶ್ವರ ಸಂಸ್ಥೆಯ ಪ್ರೇಮಾನಂದ ಅವರು ಹಾಗೂ ಶರಣು ಧರಿ,ಶ್ರೀಮತಿ ನಂದಿಮಠ ಅವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನಂದೀಶ್ವರ ಸಂಸ್ಥೆಯ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಿಂದ ಜರುಗಿದವು.

Comments