UK Suddi
The news is by your side.

ಅಕ್ರಮ ಕಸಾಯಿಖಾನೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯಿಂದ ಮನವಿ.

ಬೆಳಗಾವಿ: ಅಕ್ರಮ ಕಸಾಯಿಖಾನೆ ಮತ್ತು‌ ಮಾಂಸದಂಗಡಿ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಬಿಜೆಪಿ ಮುಖಂಡರು ಪಾಲಿಕೆ ಆಯುಕ್ತ ಶಶಿಧರ ಕುರೇರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಕಸಾಯಿಖಾನೆ ಮತ್ತು ಮಾಂಸದಂಗಡಿಗಳ ಮೇಲೆ ಪಾಲಿಕೆ ಮತ್ತು ಪೊಲೀಸ್ ರು ದಾಳಿಮಾಡಿದ ಸಂದರ್ಭದಲ್ಲಿ ಗೋವುಗಳು ಇದ್ದವು. ಆದರೆ ಇಲ್ಲಿಯ ತನಕ ಪಾಲಿಕೆ ಅಧಿಕಾರಿಗಳು ಎನು ಕ್ರಮಕೈಗೊಂಡಿಲ್ಲ. ಗೋವುಗಳ ರಕ್ಷಣೆ ಮುಂದಾಗಿಲ್ಲ. ಅನಧಿಕೃತವಾಗಿರುವ 120 ಕ್ಕೂ ಹೆಚ್ಚು ಮಾಂಸದಂಗಡಿ ಮತ್ತು ಕಸಾಯಿಖಾನೆ ಸೇರಿ ಇವೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇವರೆಗೂ ಯಾವುದೇ ಅಂಗಡಿಗಳ ಮೇಲೆ ಕ್ರಮಕೈಗೊಂಡಿಲ್ಲ. ನಿತ್ಯದಂತೆ ರಾಜಾರೋಷವಾಗಿ ಅಂಗಡಿಗಳಲ್ಲಿ ಮಾಂಸ ಮಾರಾಟ ಮತ್ತು ಕಸಾಯಿಖಾನೆ ಕೆಲಸ ಮುಂದುವರಿಸಿವೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಮುಖಂಡರಾದ ರಾಜೇಂದ್ರ ಹರಕುಣಿ, ಅನೀಲ ಬೆನಕೆ, ಕಿರಣ ಜಾಧವ, ಉಜ್ವಲಾ ಬಡವನಾಚೆ ಮೊದಲಾದವರು ಇದ್ದರು.

Comments