UK Suddi
The news is by your side.

ವಿಜಯಪುರ:ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ.

ವಿಜಯಪುರ:ದಾನಮ್ಮ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಮತ್ತೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ. 

ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳದ ಅಪ್ರಾಪ್ತೆ. ಮುದ್ದೇಬಿಹಾಳ ಪಟ್ಟಣದ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ ನಡೆದಿದೆ.

ಸಂತ್ರಸ್ತೆಯನ್ನು ಬಾಳೆತೋಟಕ್ಕೆ ಎತ್ತಿಕೊಂಡು ಹೋಗಿ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸಂತ್ರಸ್ತೆ ಕಿರುಚಾಡಿದಾಗ ಸ್ಥಳೀಯರು ಬಂದ ಕಾರಣ ಮೂವರು ಕಾಮುಕರು ಪರಾರಿಯಾಗಿದ್ದಾರೆ. ಇನ್ನೋರ್ವ ಕಾಮುಕ ಸ್ಥಳೀಯರ ಕೈಗೆ ಸಿಕ್ಕಿದ್ದು, ಅವನನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Comments