ಸ್ವಾಮಿ ರಾಜಕಾರಣ ಆಮೇಲ್ ಮಾಡ್ರಿ ನೀವುಗಳು ಮೊದಲು ಆ ಬಾಲೆಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡ್ರೀ: ಆರ್ ಎಸ್ ಪಾಟಿಲ್ ಕೂಚಬಾಳ್
ವಿಜಯಪುರ:ವಿಜಯಪುರ ಜಿಲ್ಲೆಯ ನಾಗಬೇನಾಳ್ ಗ್ರಾಮದ ಅಪ್ರಾಪ್ತೆಯ ಮೇಲಾದ ಅತ್ಯಾಚಾರ ಯತ್ನ ಖಂಡಿಸಿ ಇಂದು ಮುದ್ದೇಬಿಹಾಳದ ಅಘೋಷಿತ ಬಂದ್ ನಿರ್ಮಾಣವಾಗಿತ್ತು.
ಅತ್ಯಾಚಾರ ಯತ್ನ ಮಾಡಿದವರಿಗೆ ಶಿಕ್ಷೆ ನೀಡಬೇಕು,ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾ ನಿರತರ ಆಗ್ರಹಪೂರ್ವಕ ಮನವಿ ಮಾಡಿಕೊಳ್ಳುವಂತ ಸಂದರ್ಬದಲ್ಲಿ ಪ್ರತಿಭಟನೆ ನಿರತ ಯುವ ಹೋರಾಟಗಾರ ಸಂಜು ಬಾಗೇವಾಡಿ ಮತ್ತು ಆತನ ಗೆಳೆಯರನ್ನ ಪೊಲೀಸರು ಬಂಧಿಸಿದ್ದಾರೆ.
ಪೋಲೀಸರ ನಡೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳರ ಹಾಗೂ ಪೋಲಿಸರ ಮಧ್ಯೆ ಸ್ಥಳದಲ್ಲಿ ವಾಗ್ವಾದವೇರ್ಪಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಆರ್ ಎಸ್ ಪಾಟಿಲ್ ಕೂಚಬಾಳ್ ಅವರು “ಸ್ವಾಮಿ ರಾಜಕಾರಣ ಆಮೇಲ್ ಮಾಡ್ರಿ ನೀವುಗಳು ಮೊದಲು ಆ ಬಾಲೆಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡ್ರೀ ಕೈ ಮುಗಿದು ಕೇಳ್ತೇವೆ ಆ ಬಾಲಕಿಯು ಅಮಾನುಷ ಕೃತ್ಯವನ್ನ ನಮಗೆ ಖಂಡಿಸಲು ಅವಕಾಶ ಕೊಡಿ”ಎಂದು ಪರಿ ಪರಿಯಾಗಿ ಮನವಿ ಮಾಡಿದ್ದಾರೆ.
ಕಾನೂನು ಸುವ್ಯಸ್ಥೆ ಕಾಪಾಡಲಾಗದ ಅವರು ನಮ್ಮ ಪ್ರತಿಭಟನೆಗಳನ್ನ ಹತ್ತಿಕ್ಕುವ ಮೂಲಕ ,ಆರೋಪಿಗಳನ್ನ ರಕ್ಷಿಸುವ ಹುನ್ನಾರಕ್ಕೆ ಕೈ ಹಾಕಿರುವುದು ಖಂಡನೀಯ ಎಂದು ಹೇಳಿದರು.