ಕನ್ನಡತಿ ಉಮಾದೇವಿ ರೇವಣ್ಣ ಸೇರಿ ದೇಶದ 30 ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’.
ನವದೆಹಲಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾರಿ ಶಕ್ತಿ ಪುರಸ್ಕಾರ್-2017 ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕದ ಉಮಾದೇವಿ ರೇವಣ್ಣ ನಾಗರಾಜ್ ಹಾಗೂ ಪುಷ್ಪಾ ಗಿರಿಮಾಜಿ ಸೇರಿದಂತೆ 30 ಮಂದಿ ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನಿಸಿದರು.
ಈ ಪ್ರಶಸ್ತಿಗೆ 30 ಮಹಿಳೆಯರು ಹಾಗೂ 9 ಸಂಸ್ಥೆಗಳು ಆಯ್ಕೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಕರ್ನಾಟಕದ ಉಮಾದೇವಿ ರೇವಣ್ಣ ನಾಗರಾಜ್ ಅವರು 1989ರಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ತನ್ನ ವೃತ್ತಿಜೀವನ ಆರಂಭಿಸಿದರು.ಅನಂತರ ಅವರು ಬಿಲಿರ್ಡ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಪತ್ರಕರ್ತೆ ಪುಷ್ಪಾ ಗಿರಿಮಾಜಿ ಪುಷ್ಪಾ ಗಿರಿಮಾಜಿ ಗ್ರಾಹಕ ಹಕ್ಕುಗಳ ಬಗ್ಗೆ ವರದಿ ಮಾಡುವ ಪತ್ರಕರ್ತೆಗೆ ‘ನಾರಿ ಶಕ್ತಿ ಪುರಸ್ಕಾರ’ಲಭಿಸಿದೆ.