ಮಹಿಳೆ ಶಕ್ತಿದಾತೆ, ಸ್ಫೂರ್ತಿದಾತೆ:ಜಯಶ್ರೀ ಅಬ್ಬಿಗೇರಿ.
ಸವದತ್ತಿ:ಮಹಿಳೆ ಶಕ್ತಿದಾತೆ ಸ್ಪೂರ್ತಿದಾತೆ ಆಕೆ ಅಬಲೆಯಲ್ಲ ಸಬಲೆ.ಮನೆ ಮನ ಜೀವನ ಬೆಳಗುವ ಮಹಾಮಾತೆಯನ್ನು ಸಮಾಜ ಗೌರವಿಸಬೇಕಿದೆ ಎಂದು ಉಪನ್ಯಾಸಕಿ,ಲೇಖಕಿ ಜಯಶ್ರೀ ಅಬ್ಬಿಗೇರಿ ಹೇಳಿದರು.
ಸವದತ್ತಿಯ ಕೆ ಎಲ್ ಇ ಸಂಸ್ಥೆಯ ಎಸ್ ವಿ ಎಸ್ ಬೆಳ್ಳುಬ್ಬಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದ ಅವರು “ಮಹಿಳಾ ಶಿಕ್ಷಣವು ಆಕೆಗೆ ಆತ್ಮವಿಶ್ವಾಸ ತುಂಬುವುದಲ್ಲದೇ ಆರ್ಥಿಕ ಸ್ವಾತಂತ್ರ್ಯ ವನ್ನು ಒದಗಿಸುವುದು.ಗ್ರಾಮೀಣ ಮಹಿಳೆಯರ ಬಾಳಿನಲ್ಲಿ ಭದ್ರತೆಯನ್ನು ಬದಲಾವಣೆಗಳನ್ನು ತರುತ್ತದೆ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ ಎಸ್ ಸಿ ಮಠಪತಿಯವರು “ಸ್ತ್ರೀಯರನ್ನು ಗೌರವಿಸುವುದು ಪುರುಷ ಸಮಾಜದ ಜವಾಬ್ದಾರಿ.ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ”ಎಂದರು.
ಪ್ರಾಧ್ಯಾಪಕರಾದ ಕೆ ರಾಮರೆಡ್ಡಿ,ಮಾರುತಿ ಡೊಂಬರ,ಎಮ್ ಎಮ್ ಮೋಮಿನ,ಬಿ.ಎಸ್ ಬಳಗೇರ ಪಾಟೀಲ,ಮಂಜುನಾಥ ರೆಡ್ಡಿ,ರಾಜೇಶ ಗಾಳಿ, ಕವಿತಾ ರಂಗನಗೌಡ್ರ,ಹಾಗೂವಿದ್ಯಾರ್ಥಿನಿ ಪ್ರತಿನಿಧಿ ಗಂಗಮ್ಮ ರವದಿ ಉಪಸ್ಥಿತರಿದ್ದರು.
ಕನ್ನಡ ಪ್ರಾದ್ಯಾಪಕಿ ಡಾ. ಅರುಂಧತಿ ಬದಾಮಿ ಸ್ವಾಗತಿಸಿದರು. ವಿದ್ಯಾರ್ಥಿನಿ ರೇಖಾ ನಾವಿ ಕಾರ್ಯಕ್ರಮ ನಿರೂಪಿಸಿದಳು.ಪ್ರತೀಕ್ಷಾ ಭಂಡಾರಿ ಪ್ರಾರ್ಥನೆ ಗೀತೆ ಹೇಳಿದಳು ಸನಾ ಯಕ್ಕುಂಡಿ ಪರಿಚಯ ಭಾಷಣ ಮಾಡಿದಳು.ಅನುಷಾ ಪೂಜಾರ ವಂದಿಸಿದಳು.