UK Suddi
The news is by your side.

ವಿಡಿಯೋ:ಮದುವೆ ಬಳಿಕ ರಹಸ್ಯ ವಿಡಿಯೋ ರವಾನಿಸಿದ ಶಾಸಕರ ಪುತ್ರಿ.

ಬೆಂಗಳೂರು:ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಕಾಣೆಯಾಗಿದ್ದಾಳೆ ಎಂಬ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.ಕನ್ನಡ ಚಲನಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಜೊತೆಯಲ್ಲಿ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ರಹಸ್ಯವಾಗಿ ಮದುವೆಯಾಗಿರುವ ಸುದ್ದಿ ಹೊರಬಿದ್ದಿದೆ.

ನಿರ್ಮಾಪಕ ಸುಂದರ್ ಗೌಡ ಜೊತೆಯಲ್ಲಿ ಮದುವೆಯಾಗಿರುವ ಫೋಟೋಗಳು ಈಗ ವೈರಲ್ ಆಗಿದ್ದು, ಅದರ ಬೆನ್ನೆಲ್ಲೆ ವಿಡಿಯೋವೊಂದು ಹೊರಬಿದ್ದಿದೆ. ‘ಸುಂದರ್ ಗೌಡ ಅವರ ಜೊತೆ ನಾನು ಸ್ವ-ಇಚ್ಛೆಯಿಂದ ಮದುವೆಯಾಗಿದ್ದೀನಿ. ನಮ್ಮಿಂದ ಬೇರೆ ಯಾರಿಗೂ ತೊಂದರೆಯಾಗಬಾರದು’ ಎಂದು ಸ್ವತಃ ಲಕ್ಷ್ಮಿ ನಾಯ್ಕ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಶಾಸಕರ ಪುತ್ರಿ ಲಕ್ಷ್ಮೀನಾಯ್ಕ್ ಮತ್ತು ನಿರ್ಮಾಪಕ ಸುಂದರ್ ಗೌಡ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಇವರಿಬ್ಬರ ಪ್ರೀತಿಗೆ ಶಾಸಕರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಿನ್ನೆ ಶಾಸಕರ ಪುತ್ರಿ ಸುಂದರ್​ ಗೌಡ ಜೊತೆಗೆ ಮನೆಬಿಟ್ಟು ಬಂದಿದ್ದರು. ಇಂದು ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

Comments