UK Suddi
The news is by your side.

ರಾಮದುರ್ಗ:ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ.

ರಾಮದುರ್ಗ:ಕಾರ್ತಿಕ ಮಾಸದ ಗೌರಿ ಹುಣ್ಣಿಮೆ ದಿನವಾದ ಇಂದು ಇಲ್ಲಿನ ಶ್ರೀಪತಿ ನಗರದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ಶ್ರೀಸಂಕಮ್ಮ ದೇವಾಂಗ ಸಮಾಜ ಸೇವಾ ಸಂಘದ ಅಧ್ಯಕ್ಷ ಮನೋಹರ ಹೊನ್ನುಂಗರ ಹಾಗೂ ಉಪಾಧ್ಯಕ್ಷ ಮಾರುತಿ ಗಿಡ್ನಂದಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರಾದ ನಾರಾಯಣಪ್ಪ ಯಾದವಾಡ, ದೇವಾಂಗ ಸಮಾಜದ ಹಿರಿಯರಾದ ರಾಮಪ್ಪ ಹೊನ್ನುಂಗರ, ಪ್ರಕಾಶ ಪಾಟೀಲ, ನೀಲಕಂಠಪ್ಪ ಘಂಟಿ, ಬಸವರಾಜ ವಾಳಿ, ರಾಜು ಗುಂಜುರಿ ಮತ್ತು ಇತರರು ಉಪಸ್ಥಿತರಿದ್ದರು.

-ರಾಮಚಂದ್ರ ಯಾದವಾಡ

Comments