UK Suddi
The news is by your side.

ಸೆಕ್ಸ್ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಲು ಬಂದಿದೆ “ಚಾಟ್ ಬೋಟ್”!!

ನ್ಯೂಯಾರ್ಕ್ (ಯುನೈಟೆಡ್ ಸ್ಟೇಟ್): ಸೆಕ್ಸ್ ಕುರಿತಾಗಿ ಮುಜುಗರ ಉಂಟು ಮಾಡುವ ಪ್ರಶ್ನೆ ಏನಾದರೂ ನಿಮ್ಮನ್ನು ಕಾಡುತ್ತಿದ್ದರೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ! ಇಂತಹ ಪ್ರಶ್ನೆಗಳಿಗೆ ಉತ್ತರಿಸಲೆಂದೇ ” ಚಾಟ್ ಬೋಟ್ ” ನಿರ್ಮಾಣವಾಗಿದೆ !!

ಹದಿಹರೆಯದವರಲ್ಲಿ ಸಹಜವಾಗಿ ಏಳಬಹುದಾದ ಪ್ರಶ್ನೆಗಳಿಗೆ ಪರಿಹಾರ ನೀಡಲೆಂದೇ ಎನ್ ಜಿ ಒ ವೊಂದು ” ರೂ ” ಹೆಸರಿನ ಚಾಟ್ ಬೋಟ್ ನ್ನು ರೂಪಿಸಿದೆ. ಆರೋಗ್ಯ, ದೇಹ, ಸಂಬಂಧಗಳು ಮತ್ತು ಇತರ ಕುತೂಹಲದ ಪ್ರಶ್ನೆಗಳಿಗೆ ಇದು ಉತ್ತರ ನೀಡುತ್ತದಂತೆ !!

13 -17 ವರ್ಷದೊಳಗಿನ ಮಕ್ಕಳು ಹಾಗೂ ಕೆಲವೊಂದು ವಿಷಯದ ಅರಿತಿರದ ವಯಸ್ಕರಿಗೂ ಈ ಚಾಟ್ ಬೋಟ್ ಲಭ್ಯವಾಗಲಿದೆ. ನಿಮ್ಮ ಪ್ರಶ್ನೆಗಳನ್ನು ಟೈಪ್ ಮಾಡಿ, ಇಲ್ಲವೇ ಸಿದ್ದಪ್ರಶ್ನೆಗಳಾದ ” ನಾನು ಯಾರನ್ನಾದರೂ ಮೆಚ್ಚಿಕೊಂಡಿದ್ದರೆ ಹೇಗೆ ವ್ಯಕ್ತಪಡಿಸುವುದು?, “ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಏನಾಗುತ್ತದೆ ?”, ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಲು ಸರಿಯಾದ ವಯಸ್ಸು ಯಾವುದು ?” ಗಳನ್ನು ಕೇಳಬಹುದಂತೆ !

ಸೆಕ್ಸ್ ಕುರಿತಾದ ತರಲೆ ಪ್ರಶ್ನೆಗಳನ್ನು ಕೇಳಲು ಅಂಜಿ ಇಂಟರ ನೆಟ್ ಮೇಲೆ ಹುಡುಕಲು ಪರದಾಡುವ ಜನರಿಗೋಸ್ಕರ್ ಈ ಚಾಟ್ ಬೋಟ್ ನೆರವಾಗಲಿದೆ.

Comments