UK Suddi
The news is by your side.

ಯಾರಾಕೆ.???

ಮುಗುಳು ನಗುವ ಚೆಲ್ಲುತ

ಮನಸೂರೆಗೊಂಡವಳ್ಯಾರಾಕೆ?
ಮುಡಿಯಲ್ಲಿ ಮಲ್ಲಿಗೆ ಮುಡಿದು
ಗಡಿಬಿಡಿಯಲ್ಲಿ ಓಡಾಡುತ್ತಿದ್ದಳ್ಯಾರಾಕೆ?
ವಾರೆ ಕಣ್ನೋಟದಲ್ಲಿ ಕೊಲ್ಲುವ
ವಯ್ಯಾರದ ಮದನಾರಿಯಾರಾಕೆ?
ಅರೆ ಕ್ಷಣದಲ್ಲಿ ಪ್ರೇಮ ಬರೆಳೆದು
ಅರೆ ಹುಚ್ಚನನ್ನಾಗಿಸಿದವಳ್ಯಾರಾಕೆ?
ನಾಗರೆಡೆಯ ಜಡೆಯ ಬೀಸುತ
ನನ್ನೆದೆಯ ಜಲ್ಲೆನ್ನಿಸಿದವಳ್ಯಾರಾಕೆ?
ಜರತಾರಿ ಸೀರೆಯುಟ್ಟು ಬಳುಕುತ
ಜಲ್ಲೆ ಕಬ್ಬಂಗೆ ಕೊಬ್ಬಿದವಳ್ಯಾರಾಕೆ?
ಬ್ರಹ್ಮಚಾರಿಯು ಸಂಸಾರಿಯಾಗುವ
ಕನಸನು ಬಿತ್ತಿದವಳ್ಯಾರಾಕೆ?
ಕಚ್ಚೆ ಪಂಚೆ ಶಲ್ಯ ವಸ್ತ್ರ ತೊಟ್ಟು
ಅವಳ ಕಾಯುವಂಗೆ ಮಾಡಿದವಳ್ಯಾರಾಕೆ?
ಒಂಟಿ ಮರುಭೂಮಿ ಬಾಳಲಿ
ಮರೀಚಿಕೆಯಂಗೆ ಕಂಡವಳ್ಯಾರಾಕೆ?
ಗಟ್ಟಿಮೇಳ ಮೊಳಗುವ ಮುನ್ನವೇ
ನನ್ನ ಬಿಟ್ಟು ಹೋದವಳ್ಯಾರಾಕೆ??
ಶಿವಮೂರ್ತಿ.ಹೆಚ್.ಕನ್ನಡ ಶಿಕ್ಷಕರು ದಾವಣಗೆರೆ.

Comments