UK Suddi
The news is by your side.

ಇದು “ಬಾಂಬೆ ಮಿಠಾಯಿ ಬಜೆಟ್” ಸಿಎಂ ಕುಮಾರಸ್ವಾಮಿ.

ಬೆಂಗಳೂರು: ಸಂಸತ್ತಿನಲ್ಲಿ ಇಂದು ಮಂಡನೆಯಾಗಿರುವ ಮಧ್ಯಂತರ ಬಜೆಟ್ ” ಬಾಂಬೆ ಮಿಠಾಯಿ ” ಬಜೆಟ್ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಪ್ರಸಕ್ತ ಬಜೆಟ್ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಆದಾಯ ತೆರಿಗೆ ಮಿತಿಯನ್ನು ದುಪ್ಪಟ್ಟು ಮಾಡಲಾಗಿದೆ. ಇದನ್ನು ಐದು ವರ್ಷಗಳ ಹಿಂದೆಯೇ ನಿರೀಕ್ಷಿಸಲಾಗಿತ್ತು. ರೈತರಿಗೆ ವಾರ್ಷಿಕ 6000 ರೂ. ಕೊಡುವುದಾಗಿ ಹೇಳಿದ್ದಾರೆ . ಅದು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೆಯೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಾವು 12 ಸಾವಿರ ಕೋಟಿ ರೂ. ಗಳನ್ನು ಹಾಲಿನ ಸಬ್ಸಿಡಿಗಾಗಿಯೇ ನೀಡುತ್ತಿದ್ದೇವೆ. ಉಪನಗರ ರೈಲ್ವೆ ಯೋಜನೆಗೂ ಕೇಂದ್ರ ಒಪ್ಪಿಗೆ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Comments