UK Suddi
The news is by your side.

ಕಲಬುರಗಿಯಲ್ಲಿ ಸ್ಕಾರ್ಪಿಯೋ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು.

ಕಲಬುರಗಿ: ಸ್ಕಾರ್ಪಿಯೋ ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೇಡಂ ಪಟ್ಟಣದ ಜಿ.ಕೆ.ರಸ್ತೆಯ ವಾಸವದತ್ ಸಿಮೆಂಟ್ ಕಾರ್ಖಾನೆ ಎದುರುಗಡೆ ನಡೆದಿದೆ.

ಮೃತನನ್ನು ಮಲ್ಲಿಕಾರ್ಜುನ ಅಣ್ಣಾರಾಯ ಪಾಟೀಲ (26) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ನಂತರ ಜೀಪ್ ಚಾಲಕ ಪರಾರಿಯಾಗಿದ್ದಾನೆ.

ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Comments