UK Suddi
The news is by your side.

ಬಂಕಾಪುರ ಮಠದಲ್ಲಿ ಶರಣ ಚೇತನ ಪತ್ರಿಕೆಯ ವಿಶೇಷ ಸಂಚಿಕೆಯ ಅನಾವರಣ.

ಹಾವೇರಿ:ಭಾರತ ಪೂಣ್ಯಭೂಮಿ.ಧರ್ಮ – ದೇವತೆಗಳ ತವರೂರು.ಇಲ್ಲಿ ಸನಾತನ ಧರ್ಮ, ಸಂಪ್ರದಾಯ,ಆಚಾರ, ವಿಚಾರ, ಸಂಪ್ರದಾಯ ಬೆಳೆದು ಬಂದಿರುವಂತೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪುರ ಭಾವೀಸ್ ಮಹಲ್ ಕಟ್ಟಿಮನಿ ಅರಳೆಲೆ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ಕಾಯಕ ಪರಂಪರೆ ಬಹುಮುಖವಾದುದು.ಅನೇಕತೆಯಲ್ಲಿ ಏಕತೆಯನ್ನು ಕಂಡುಕೊಂಡಂತಹ ಶ್ರೀಮಠ.

ಶ್ರೀಮಠದಲ್ಲಿ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ 45ನೇ ಪುಣ್ಯಾರಾಧನೆ,60 ರ ಸಂಭ್ರಮ, ತುಲಾಭಾರಗಳು ಶ್ರೀಮಠದಲ್ಲಿ ಜಗದ್ಗುರುಗಳವರ ಸಾನಿಧ್ಯದಲ್ಲಿ ಇತ್ತೀಚೆಗೆ ನಡೆದವು.

ಮಹಾದೇವ ಬಿರಾದಾರ ಸಂಪಾದಕದ ಶರಣ ಚೇತನ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳವರು, ಶ್ರೀ ಉಜ್ಜಯಿನಿ ಮಹಾಸನ್ನಿಧಿಯವರು ಬಿಡುಗಡೆ ಮಾಡಿದರು.

ಮಳಲಿಮಠ, ಪುಣ್ಯಕೋಟಿ, ಸಂಗೊಳ್ಳಿ, ಹಂಸಭಾವಿ, ಮುಕ್ತಿಮಂದಿರ, ಕುಮಾರಪಟ್ಟಣಂ, ಶಿಗ್ಗಾವಿ, ಕಲಘಟಗಿ ಪೂಜ್ಯರು ಮೊದಲ್ಗೊಂಡು ಮಾಜಿ ಸಚಿವರು,ಶಾಸಕರಾದ ಬಸವರಾಜ ಬೊಮ್ಮಾಯಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments