UK Suddi
The news is by your side.

ಬಜೆಟ್ ಬಗ್ಗೆ ಗೃಹ ಸಚಿವ ಎಂಬಿ ಪಾಟೀಲ ಏನಂದ್ರು ಗೊತ್ತಾ..?

ಬೆಂಗಳೂರು:ಲೋಕಸಭೆ ಚುನಾವಣೆಗೆ ಹಲವು ಕೆಲವೇ ವಾರಗಳು ಬಾಕಿ ಇರುವಾಗಲೇ,ಇಂದು ಮೋದಿ ನೇತೃತ್ವದ ಎನ್ಡಿಎ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಿದೆ.ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಎಂಬಿ ಪಾಟೀಲ ಇಂದು ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್ ಕೇವಲ ಕಣ್ಣೊರೆಸುವ ತಂತ್ರ ಅಷ್ಟೇ ಎಂದು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಮುಂಬರುವ 2019ರ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತದೆ.ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಜೆಟ್ ಗೆ ಬೆಲೆ ಇರುತ್ತದೆ ಎಂದಿದ್ದಾರೆ.ಹೀಗಾಗಿ,ಈ ಮಧ್ಯಂತರ ಬಜೆಟ್ ಮೂಲಕ ಘೋಷಣೆ ಮಾಡಿರುವ ಭರವಸೆಗಳೆಲ್ಲವೂ ಕೇವಲ ಭರವಸೆ ಮಾತ್ರ ಎಂದಿದ್ದಾರೆ.

Comments