UK Suddi
The news is by your side.

ಬಿಜೆಪಿಯಿಂದ ಓಬಿಸಿ ವರ್ಗಗಳ ಬಲಪಡಿಸುವ ಪ್ರಯತ್ನ ನಡೆದಿದೆ: ಬಿ.ಜೆ.ಪುಟ್ಟಸ್ವಾಮಿ.

ಬೆಳಗಾವಿ: ಎಪ್ರೀಲ್- ಮೇ ತಿಂಗಳ ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಹಿಂದುಳಿದ ವರ್ಗಗಳ ಸಂಘಟನೆ ಬಲಪಡಿಸುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಓಬಿಸಿ ಘಟಕದ ರಾಜ್ಯಾಧ್ಯಕ್ಷ ಬಿ. ಜೆ. ಪುಟ್ಟಸ್ವಾಮಿ ತಿಳಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿದ ಅವರು ರಾಜ್ಯದ ಉದ್ದಗಲಕ್ಕೂ ಪ್ರಯಾಣ ಮುಂದುವರೆದಿದೆ. ಹಿಂದುಳಿದ ವರ್ಗಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ದಕ್ಷಿಣದಲ್ಲಿ 12.5 ವಕ್ಕಲಿಗರು, ಉತ್ತರ ಕರ್ನಾಟಕದಲ್ಲಿ 15.5 ಲಿಂಗಾಯತ 33% OBC ವರ್ಗಗಳು ರಾಜ್ಯದಾದ್ಯಂತ ಪಸರಿಸಿವೆ. ಓಬಿಸಿ ಬೆಂಬಲ ಪಡೆಯುವ ಪಕ್ಷವೇ ಅಧಿಕಾರ ಹಿಡಿಯುತ್ತದೆ ಎಂದು ಪುಟ್ಟಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. 52.4% ಹಿಂದುಳಿದ ವರ್ಗಗಳ ಜನತೆ ರಾಜ್ಯದಲ್ಲಿ ಇದ್ದಾರೆ. ಅದರಲ್ಲಿ 32.7% ಕುರುಬರು ರಾಜ್ಯದಲ್ಲಿ ಇದ್ದಾರೆ ಎಂದರು.

ಮೋದಿ ಮತ್ತೆ ಪ್ರಧಾನಿ: ಆಗುವ ಸ್ಪಷ್ಠ ಭರವಸೆ ಇದೆ. ಇಡೀ ಪ್ರಪಂಚದ ಭಯೋತ್ಪಾದಕ ದೇಶ ಪಾಕಿಸ್ತಾನದ ಬಣ್ಣ ಬಯಲು ಮಾಡಿ ಜಗತ್ತಿನ ಬೆಂಬಲ ಮೋದಿ ಗಿಟ್ಟಿಸಿದ್ದಾರೆ. ಸೈನಿಕರಿಗದ ಹಣ, ಯುದ್ಧ ಸಾಮಗ್ರಿ ಮತ್ತು ಉತ್ತೇಜನ ಕೊಟ್ಟಿದ್ದಾರೆ, ಇದರಿಂದ ರಕ್ಷಣಾ ವಿಷಯದಲ್ಲಿ ಬಲಿಷ್ಠವಾಗಿದೆ. ಚೀನಾ ಹಿಮ್ಮೆಟ್ಟಿಸುವಲ್ಲಿ ಮೋದಿ ಗಂಭೀರತೆ ಗಮನಾರ್ಹ ಎಂದರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿ 2.5ಲಕ್ಷ ಕೋಟಿಯಷ್ಟು ಹಣ ತೀರಿಸುವಲ್ಲಿ ನರೇಂದ್ರ ಮೋದಿ ಸಫಲರಾಗಿದ್ದಾರೆ. ಮುಳುಗುತ್ತಿದ್ದ ಬ್ಯಾಂಕಿಂಗ್ ವ್ಯವಸ್ಥೆ ಉತ್ತೇಜನಕ್ಕೆ 1.01ಲಕ್ಷ ಕೋಟಿ recapital ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಸರಕಾರ ನೀಡಿದ್ದಾರೆ. 2.44ಲಕ್ಷ ಬೋಗಸ್ ಸಂಘ ಸಂಸ್ಥೆ ಇಂಡಸ್ಟ್ರಿಗಳಿಗೆ ಬೀಗ ಹಾಕಲಾಗಿದೆ. ಗಣಿಗಾರಿಕೆ ಅಕ್ರಮ ನಿಲ್ಲಿಸಿ, ಬರೀ 83 ಪಾರದರ್ಶಕ ಗಣಿಗೆ ಅವಕಾಶ ನೀಡಿ 3.94ಲಕ್ಷ ಕೋಟಿ ಹಣ ಲಾಭ ಪಡೆಯಲಾಗಿದೆ. ಶಾಸಕ ಅನಿಲ ಬೆನಕೆ, ಎಲ್. ಕೆ. ರಾಜು, ತಿಪ್ಪೇಸ್ವಾಮಿ, ಸೋಮಶೇಖರ,ಮುರಘೇಂದ್ರ ಪಾಟೀಲ, ಮಂಗೇಶ ಪವಾರ ಉಪಸ್ಥಿತರಿದ್ದರು.

Comments