UK Suddi
The news is by your side.

ಮೋದಿ ಸರಕಾರ ದಿನಕ್ಕೆ 17 ರೂ. ಆದಾಯ ಘೋಷಿಸಿ ರೈತ ಸಮುದಾಯಕ್ಕೆ ಅವಮಾನ ಮಾಡಿದೆ: ರಾಹುಲ್ ಗಾಂಧಿ.

ನವದೆಹಲಿ: ಇಂದು ಸಂಸತ್ತಿನಲ್ಲಿ ಮಂಡನೆಯಾದ 2019-20 ನೇ ವರ್ಷದ ಮಧ್ಯಂತರ ಬಜೆಟ್ ವಿಷಯವಾಗಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರೈತರ ಜೀವನವನ್ನು ಹಾಳು ಮಾಡಿರುವ ಮೋದಿ ಸರಕಾರ, ದಿನಕ್ಕೆ 17 ರೂ. ಗಳ ಆದಾಯ ಘೋಷಿಸುವ ಮೂಲಕ ರೈತ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ದೂಷಿಸಿದ್ದಾರೆ.

ಮೋದಿಯವರೇ ಐದು ವರ್ಷಗಳ ನಿಮ್ಮ ಅಸಮರ್ಥತೆ ಮತ್ತು ಸೊಕ್ಕಿನ ನಡೆಯಿಂದಾಗಿ ರೈತರ ಜೀವನ ಹಾಳಾಗಿದ್ದು, ದಿನವೊಂದಕ್ಕೆ 17 ರೂ. ಕೊಡುವ ನಿಮ್ಮ ಘೋಷಣೆ ಅವರಿಗೆ ಮಾಡಿರುವ ದೊಡ್ಡ ಅವಮಾನ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Comments