UK Suddi
The news is by your side.

ಚುನಾವಣೆ ಹಿನ್ನಲೆ ರಾಮಮಂದಿರ ಆಂದೋಲನ ತಡೆಹಿಡಿದ ವಿಹಿಂಪ ನಿರ್ಣಯ ದೌರ್ಭಾಗ್ಯಪೂರ್ಣ: ರಮೇಶ ಶಿಂದೆ ಆಕ್ರೋಶ

ಪ್ರಯಾಗರಾಜ(ಉತ್ತರ ಪ್ರದೇಶ): ವಿಹಿಂಪ ಆಯೋಜಿಸಿದ ಧರ್ಮಸಂಸತ್ತಿನಲ್ಲಿ ರಾಮಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಸಂಕಲ್ಪವನ್ನು ಮಾಡದೇ ಚುನಾವಣೆಯ ಹಿನ್ನಲೆಯಲ್ಲಿ ಇಡೀ ರಾಮಮಂದಿರದ ಆಂದೋಲನವನ್ನು ತಡೆಹಿಡಿದಿರುವುದು ದೌರ್ಭಾಗ್ಯ ಪೂರ್ಣ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ಇದು ಹಿಂದೂ ಸಮಾಜದ ಆಕಾಂಕ್ಷೆಗಳಿಗೆ ಅವಮಾನಿಸುವ ನಿರ್ಣಯವಾಗಿದೆ. ಇಂದು ರಾಮಮಂದಿರದ ನಿರ್ಮಾಣಕ್ಕಾಗಿ ಸಮಸ್ತ ಭಾರತದಲ್ಲಿ ಆಸೆಯು ಚಿಗುರೊಡೆದಿತ್ತು. ಸಮಸ್ತ ಹಿಂದೂ ಸಮಾಜವು ಧರ್ಮಸಂಸತ್ತಿನಲ್ಲಿ ಒಟ್ಟಾಗಿದ್ದ ಸಂತರಿಂದ ನಿರ್ಣಾಯಕ ಆಂದೋಲನದ ಉದ್ಘೋಷಣೆಯನ್ನು ಕೇಳಲು ಕಾತುರವಾಗಿತ್ತು;

ಆದರೆ ಕೇವಲ ಒಂದು ವಿಶಿಷ್ಟ ರಾಜಕೀಯ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ಪಡೆಯಲು ಯಾವುದೇ ಅಡಚಣೆಯಾಗದಿರಲಿ, ಎಂಬುದಕ್ಕಾಗಿ ಆಂದೋಲನವನ್ನು ತಡೆಹಿಡಿಯಲಾಯಿತು. ಹೀಗೆ ಮಾಡುವ ಮೂಲಕ ವಿಹಿಂಪ ತನ್ನನ್ನು ಒಂದು ರೀತಿಯಲ್ಲಿ ರಾಜಕೀಯ ಪಕ್ಷದ ಬೆಂಬಲಿಗನಂತೆ ಸಾಬಿತು ಪಡಿಸಿತು. ‘ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವನ್ನು ಸೂಚಿಸದೇ ರಾಮಮಂದಿರದ ನಿರ್ಮಾಣದ ಅಂತಿಮ ಗುರಿಯನ್ನು ಹಿಂದೂ ಸಮಾಜದ ಮುಂದೆ ಇಡಲು ವಿಹಿಂಪಗೆ ಇದೊಂದು ಸುವರ್ಣಾವಕಾಶವಾಗಿತ್ತು.

ಆದರೆ ತನ್ನ ಅರಾಜಕೀಯ ಚಿತ್ರಣವನ್ನು ತೋರ್ಪಡಿಸಲು ವಿಹಿಂಪ ವಿಫಲವಾಯಿತು. ವಾಸ್ತವದಲ್ಲಿ ತ್ರಿವಳಿ ತಲಾಕ್ ಮತ್ತು ಜಿಎಸ್‌ಟಿಗಾಗಿ ಸುಗ್ರೀವಾಜ್ಞೆ ತಂದ ಭಾಜಪ ಸರಕಾರ ರಾಮಮಂದಿರ ನಿರ್ಮಾಣಕ್ಕಾಗಿಯೂ ಸುಗ್ರೀವಾಜ್ಞೆ ತರಲಿ ಎಂದು ವಿಹಿಂಪ. ಧರ್ಮಸಂಸತ್ತಿನಲ್ಲಿ ಆಗ್ರಹಿಸುವುದು ಅಪೇಕ್ಷಿತವಿತ್ತು. ಆದರೆ ಈ ಧರ್ಮಸಂಸತ್ತು ಸಮಸ್ತ ಹಿಂದೂ ಸಮಾಜಕ್ಕೆ ನಿರಾಶೆ ತಂದಿತು. ಯಾವ ಸರಕಾರಕ್ಕೆ ಕಳೆದ ೭೧ ವರ್ಷಗಳಲ್ಲಿ ರಾಮಮಂದಿರ ಕಟ್ಟಲಾಗಲಿಲ್ಲ ಅಥವಾ ಕಳೆದ 5 ವರ್ಷಗಳಲ್ಲಿ ಆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಲಿಲ್ಲ, ಅದು ಪುನಃ ಅಧಿಕಾರ ಪಡೆದ ನಂತರ ರಾಮ ಮಂದಿರ ಕಟ್ಟುವುದು ಎಂಬ ವಿಚಾರ ಹಾಸ್ಯಾಸ್ಪದವಾಗಿದೆ.

ಈಗಲೂ ಸಮಯ ಕಳೆಯದೇ ಬಜೆಟ್ ಅಧಿವೇಶನದಲ್ಲಿ ಬಜೇಟ್ ಮಂಡಿಸುವ ಸರಕಾರಕ್ಕೆ ವಿಶ್ವದ 100 ಕೋಟಿಗಿಂತ ಹೆಚ್ಚು ಹಿಂದೂಗಳ ಭಾವನೆಗಳನ್ನು ಗೌರವಿಸಲು ಸರಕಾರ ರಾಮಮಂದಿರದ ನಿರ್ಮಾಣದ ತಿಥಿ (ದಿನಾಂಕ) ಯನ್ನು ಘೋಷಿಸಬೇಕು, ಎಂದು ಆಗ್ರಹಿಸಬೇಕು. ಇದರ ಘೋಷಣೆಯಾದರೆ ಸಮಸ್ತ ಹಿಂದೂ ಸಮಾಜ ಈ ರಾಮಕಾರ್ಯದಲ್ಲಿ ಸಕ್ರಿಯವಾಗುವುದು.

ಸರ್ವೋಚ್ಚ ನ್ಯಾಯಾಲಯ ಶೀಘ್ರದಲ್ಲಿಯೇ ಈ ಬಗ್ಗೆ ಪ್ರಕ್ರಿಯೆ ಪೂರ್ಣ ಮಾಡುವುದು, ಎಂಬ ವಿಹಿಂಪ. ರಾಮಮಂದಿರದ ಪ್ರಸ್ತಾವನೆಯ ಬಗ್ಗೆ ಇಟ್ಟ ವಿಶ್ವಾಸ ಯೋಗ್ಯವಿದೆ. ಆದರೆ ನ್ಯಾಯಾಲಯದ ಮೇಲೆ ವಿಶ್ವಾಸವಿರುತ್ತಿದ್ದರೆ ನ್ಯಾಯಾಲಯದ ಮಾತು ಕೇಳದೇ ೧೯೯೨ ರಲ್ಲಿ ಬಾಬರಿ ಧ್ವಂಸದ ಆಂದೋಲನ ಏಕೆ ಮಾಡಲಾಯಿತು ? ಇದರ ಉತ್ತರವನ್ನೂ ಇಡೀ ವಿಶ್ವದ ಹಿಂದೂ ಸಮಾಜವು ವಿಹಿಂಪನಿಂದ ಕೇಳಬಯಸುತ್ತದೆ.

ನಾವು ಮಂದಿರ ಅಲ್ಲೇ ಕಟ್ಟುತ್ತೇವೆ, ಆದರೆ ದಿನಾಂಕ ಹೇಳುವುದಿಲ್ಲ, ಈ ದಿಶಾಹೀನತೆ ಇನ್ನೆಷ್ಟು ದಿನ ನಡೆಯುವುದು ? ನಾವು ಶ್ರದ್ಧಾವಂತ ಹಿಂದೂ ಸಮಾಜದ ಪ್ರತಿನಿಧಿಯ ರೂಪದಲ್ಲಿ ನಮ್ಮ ಭಾವನೆಯನ್ನು ವಿಶ್ವದ ಎಲ್ಲಕ್ಕಿಂತ ದೊಡ್ಡ ಹಿಂದೂ ಸಂಘಟನೆ ಎದುರು ಈ ಪತ್ರಿಕಾ ಪ್ರಕಟಣೆಯ ಮೂಲಕ ಮಂಡಿಸುತ್ತಿದ್ದೇವೆ, ಎಂಬುದನ್ನು ಗಮನದಲ್ಲಿರಿ ಎಂದು ಹೇಳಿದ್ದಾರೆ.

Comments