UK Suddi
The news is by your side.

ಪಿಕೆಪಿಎಸ್ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆ.

ಬೈಲಹೊಂಗಲ: ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ, ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ಪಿಕೆಪಿಎಸ್ ಕ್ಷೇಮಾಭಿವೃದ್ಧಿ ಮಹಾಮಂಡಳದ ಸದಸ್ಯರು ಶುಕ್ರವಾರ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪ್ರಾರಂಭವಾಗಿ 115 ವರ್ಷ ಕಳೆದರೂ ಸಹ ಅಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ರೀತಿಯ ಸೇವಾಭದ್ರತೆ, ವೇತನಶ್ರೇಣಿ, ಪಿಂಚಣಿಯನ್ನು ಸರಕಾರ ನಿಗದಿಗೊಳಿಸಿಲ್ಲ.

ಇಲ್ಲಿಯ ನೌಕರರು ಗ್ರಾಮೀಣ ಪ್ರದೇಶದಲ್ಲಿ ಬೆಳೆವಿಮಾ, ಸರಕಾರದ ಸಹಾಯಧನ, ಪಡಿತರ ವಿತರಣೆ, ವ್ಯವಸಾಯೋಪಕರಣ, ಸಾಲಮನ್ನಾದಂತಹ ಕೆಲಸಗಳನ್ನು ಮಾಡಲಾಗುತ್ತಿದೆ. 25 ವರ್ಷಗಳಿಂದ ಸಂಘಟನೆಯಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನಿರ್ಲಕ್ಷಿಸುತ್ತಿದೆ. ಸಹಕಾರ ಇಲಾಖೆ ಕಾರ್ಯದರ್ಶಿ ಸೂಚನೆಯಂತೆ ಸಹಕಾರ ಸಂಘಗಳ ನಿಬಂದಕರು ರಚಿಸಿದ ಅಧ್ಯಯನ ಸಮಿತಿ ಪ್ರಕಾರ 31-1-20117 ರಂದು ಸಹಕಾರ ಇಲಾಖೆ ಕಾರ್ಯದರ್ಶಿಗಳಿಗೆ ಈ ನೌಕರರ ಬೇಡಿಕೆಗಳನ್ನು ಇಡೇರಿಸುವಂತೆ ಸೂಚಿಸಿದ ವಿವರವಾದ ವರದಿಯಂತೆ ಸೌಲಭ್ಯ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಸರಕಾರ ಮಧ್ಯವಸ್ಥಿಕೆ ವಹಿಸಿ ಸೌಲಭ್ಯ ಕಲ್ಪಿಸದಿದ್ದರೆ ಫೆ. 2019 ಮೊದಲ ವಾರದಲ್ಲಿ ತಾಲೂಕಾ ಮಟ್ಟದಲ್ಲಿ ನೌಕರರ ಜಾತಾ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುವದು ಸಂಘಟನೆ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವೀರಣ್ಣ ಮಲ್ಲೂರ, ಜಗದೀಶ ಕಮತಗಿ, ವಿಶ್ವನಾಥ ಕೂಲಿನವರ, ಬಸವರಾಜ ವಾಲಿ, ಚನಗೌಡ ಗೌಡರ, ಆನಂಚ ಖೊದನಪೂರ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ವರದಿ: ಚಿದಂಬರ ಕುರುಬರ

Comments