UK Suddi
The news is by your side.

ಫೆ 4 ರಂದು ಸಹಕಾರಿ ಸಂಘಗಳ ನೌಕರರ ಬೃಹತ್ ಸಮಾವೇಶ.

ಬೆಳಗಾವಿ: ರಾಜ್ಯದಲ್ಲಿರುವ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ವದಗಿಸುವಂತೆ ವತ್ತಾಯಿಸಿ ಫೆಬ್ರುವರಿ 4 ರಂದು ಬೆಳಗಾವಿಯಲ್ಲಿ ಮಹಾರ್ಯಾಲಿ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾಧ್ಯಕ್ಷ ಡಿ.ಎಸ್.ಬಡಗಿಗೌಡರ ಹೇಳಿದರು

ಇಂದು ಬೆಳಗಾವಿಯ ಖಾಸಗಿ ಹೋಟೆಲ್ ಒಂದರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ‌ಸಹಕಾರ ಸಂಘ ಬ್ಯಾಂಕುಗಳ ಕ್ಷೆಮಾಭಿವೃದ್ಧಿ ಮಹಾಮಂಡಳ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಸಹಕಾರಿ ಸಂಘ ಸಂಸ್ಥೆಗಳು ಪ್ರಾರಂಭವಾಗಿ 115 ವರ್ಷಗಳು ಕಳೆದಿವೆ.

ಅವುಗಳಲ್ಲಿ ಸುಮಾರು 25 ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಅವರಿಗೆ ಇನ್ನೂವರೆ ಯಾವುದೇ ಸೇವಾಭದ್ರತೆ, ವೇತನ ಶ್ರೇಣಿ, ಪಿಂಚಣಿ ಸೌಲಬ್ಯಗಳನ್ನು ವದಗಿಸಿಲ್ಲ. 2016ರಲ್ಲಿ ಸೌಲಭ್ಯಗಳನ್ನು ವದಗಿ‌ಸುವಂತೆ ಕಾರ್ಮಿಕರ ಬೃಹತ್ ಪ್ರತಿಭಟನೆ ಮಾಡಲಾಗಿತ್ತು ಆದರೆ ಅದು ಇನ್ನು ಜಾರಿಯಾಗಿಲ್ಲ ಅದ್ದರಿಂದ ಸಹಕಾರಿ ಸಂಘಗಳ ಪರಿಷತ್ತಿನ ನೌಕರರಿಗೆ ಸೌಲಭ್ಯ ವದಗಿಸುವಂತೆ ವತ್ತಾಯಿಸಿ ಪೆಬ್ರುವರಿ ನಾಲ್ಕರಂದು ಬೆಳಗಾವಿ ಧರ್ಮನಾಥ ಭವನದಿಂದ ರ್ಯಾಲಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಸಂಗಯ್ಯಾ ಹಿರೇಮಠ, ಶಿವಾನಂದ ಹುಕ್ಕೇರಿ, ಬಸವರಾಜ ರಾಮನ್ನವರ, ವಿ.ಎಸ್ ಪೋತದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Comments