UK Suddi
The news is by your side.

ಬಜೆಟ್ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲು!

ನವದೆಹಲಿ:ಶುಕ್ರವಾರದಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪಿಯೂಷ್ ಗೋಯಲ್ ಅವರಿಂದ ಮಂಡಿಸಲಾದ ಮಧ್ಯಂತರ ಬಜೆಟ್ ರದ್ದುಗೊಳಿಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದು ದಾಖಲಾಗಿದೆ.

ಮನೋಹರ್ ಲಾಲ್ ಶರ್ಮಾ ಎನ್ನುವವರು ಈ ಅರ್ಜಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದಾರೆ.

ವಾರ್ಷಿಕ ಬಜೆಟ್ ಮಂಡಿಸಲು ಸಂವಿಧಾನದಲ್ಲಿ ಅವಕಾಶವಿದೆ,ಮಧ್ಯಂತರ ಬಜೆಟ್ ಮಂಡನೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದು,ಮಧ್ಯಂತರ ಬಜೆಟ್, ಲೇಖಾನುದಾನ ಎಂದು ಕರೆಯಲ್ಪಡುತ್ತದೆ ಎಂದು ಮನೋಹರ್ ಲಾಲ್ ಶರ್ಮಾ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತೋ ಕಾದು ನೋಡಬೇಕಿದೆ.

Comments