UK Suddi
The news is by your side.

ಬೆಳೆ ವಿಮೆ ಹಣಕ್ಕಾಗಿ ರೈತರ ಪ್ರತಿಭಟನೆ ಉಗ್ರ ಸ್ವರೂಪ: ಡಿ.ಸಿ ಕಾರಿಗೆ ಮುತ್ತಿಗೆ.

ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಬೆಳೆ ವಿಮೆ ಹಣಕ್ಕಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು.

ಇಂದು ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾಧಿಕಾರಿಗಳ ವಾಹನಕ್ಕೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದರು. ಕಳೆದ ಹಲವು ತಿಂಗಳುಗಳಿಂದ ಕೇವಲ ಆಶ್ವಾಸನೆ ಅಷ್ಟೇ ಸಿಗುತ್ತಿದೆ. ಯಾರೂ ರೈತರ ಕಷ್ಟ ನೋಡುತ್ತಿಲ್ಲ ಬ್ಯಾಂಕ್ ಮೈಕ್ರೋ ಫೈನಾನ್ಸ್ ದವರ ಕಾಟ ಹೆಚ್ಚಾಗಿದೆ ಆದ್ದರಿಂದ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್ , ಬೊಮ್ಮನಹಳ್ಳಿ ರೈತರ ಕಷ್ಟಕ್ಕೆ ಸ್ಪಂದಿಸುವದಾಗಿ ಹಾಗೂ ಬ್ಯಾಂಕಿನವರ ಉಪಟಳ ತಡಯಲು ಮತ್ತು ರೈತರ ಖಾತೆಗೆ ಬೆಳೆ ವಿಮಾ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ನಂತರ ಶಾಂತಗೊಂಡ ರೈತರು ಜಿಲ್ಲಾಧಿಕಾರಿ ವಾಹನ ಹೋಗಲು ಅನುವು ಮಾಡಿ ಕೊಟ್ಟರು.

Comments