UK Suddi
The news is by your side.

ಪ್ರಧಾನಮಂತ್ರಿ ಉಜ್ವಲಾ ಯೋಜನೆ ಹೆಣ್ಣು ಮಕ್ಕಳಿಗೆ ವರದಾನವಾಗಿದೆ: ಶಾಸಕ ಅನಿಲ ಬೆನಕೆ.

ಬೆಳಗಾವಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲಾ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯು ಹೆಣ್ಣು ಮಕ್ಕಳಿಗೆ ವರದಾನವಾಗಿದ್ದು, ಅದರ ಸರಿಯಾದ ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಜೀವನ ಮಾಡಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಆಕಾಶ ಎಂಟರಪ್ರೈಸಸ್ ಆಶ್ರಯದಲ್ಲಿ 60 ಜನ ಫಲಾನುಭವಿಳಿಗೆ ಮಂಜೂರಾದ ಉಚಿತ ಎಲ್ ಪಿಜಿ ಗ್ಯಾಸ್ ವಿತರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಹೇಶ್ವರಿ ಸೋಮಾಜಿಚೆ, ನಿಖಿಲ್ ಮುರಕುಟೆ, ನಾಗೇಶ ಲಂಗರಖಾಂಡೆ, ವಿನಾಯಕ ಕಮ್ಮಾರ ಇತರರು ಉಪಸ್ಥಿತರಿದ್ದರು.

Comments