UK Suddi
The news is by your side.

ಶಾಸಕ ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಕಾರ್ಖಾನೆ ತನಿಖೆಗೆ ಸಮಿತಿ ರಚನೆ.

ಬೆಳಗಾವಿ: ಮಾತೃ ಪಕ್ಷದೊಂದಿಗೆ ಸಂಬಂಧ ಹದಗೆಡಿಸಿಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈಗ ಕಬ್ಬಿನ ಬಿಲ್ ತನಿಖಾ ಸಂಕಟ ಎದುರಾಗಿದೆ. ತಮ್ಮ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಕೊಡಬೇಕಾದ ಬಾಕಿ ಬಿಲ್ ಉಳಿಸಿಕೊಂಡಿದ್ದಾರೆ ಎಂಬ ರೈತರ ಆರೋಪಕ್ಕೆ ಸಂಬಂಧಿಸಿ 2014-15ನೇ ಸಾಲಿನ ಸಂಪೂರ್ಣ ತನಿಖೆ ನಡೆಸುವಂತೆ ಡಿ. ಸಿ. ಎಸ್. ಬಿ. ಬೊಮ್ಮನಹಳ್ಳಿ ಆದೇಶಿಸಿದ್ದಾರೆ.

ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಹಾಗೂ ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ, ಸಹಕಾರ ಇಲಾಖೆ ಒಳಗೊಂಡ ಅಧಿಕಾರಿಗಳ ಸಮಿತಿ ಬಾಕಿ ಬಿಲ್ ಬಗ್ಗೆ ‘ಸ್ಕ್ರೀನಿಂಗ್’ ಮಾಡಲಿದೆ. ಸಮಿತಿ ನೀಡುವ ತನಿಖಾ ವರದಿ ಸರಕಾರಕ್ಕೆ ಕಳುಹಿಸಲಾಗುವುದು. ವರದಿ ಆಧರಿಸಿ ಸರಕಾರ ನೀಡುವ ಮರು ಆದೇಶದ ಮೇರೆಗೆ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳುವುದಾಗಿ ಡಿಸಿ ಎಸ್. ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

Comments