UK Suddi
The news is by your side.

ಸಾವಿರಾರು ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ಖ್ಯಾತಿ ಡಾ: ಆರ್.ಬಿ ಪಾಟೀಲರದ್ದು: ಸಂಸದ ಜೋಶಿ.

ಹುಬ್ಬಳ್ಳಿ: ಸಂಸದ ಪ್ರಲ್ಹಾದ ಜೋಶಿ ಅವರು ನಿನ್ನೆ ಕೊನೆಯುಸಿರೆಳೆದ ಹುಬ್ಬಳ್ಳಿಯ ಖ್ಯಾತ ವೈದ್ಯ, ಕ್ಯಾನ್ಸರ್ ತಜ್ಞ ಪದ್ಮಶ್ರೀ ಡಾ: ಆರ್. ಬಿ. ಪಾಟೀಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ತಮ್ಮ ಗೌರವ ನಮನಗಳನ್ನು ಸಲ್ಲಿಸಿದರು.

ನಂತರ ಮಾತನಾಡಿದ ಅವರು ಕ್ಯಾನ್ಸರ್ ಚಿಕಿತ್ಸೆ ಎಂದರೆ ಮುಂಬೈಗೆ ಅಥವಾ ಚೆನ್ನೈ ಹೋಗುವ ಪರಿಸ್ಥಿತಿ ಇದ್ದಾಗ ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಸಂಸ್ಥೆ ಸ್ಥಾಪಿಸಿ ಕ್ಯಾನ್ಸರ್ ಗೆ ತುತ್ತಾದ ಸಾವಿರಾರು ಬಡವರಿಗೆ ಚಿಕಿತ್ಸೆ ನೀಡಿದ ಖ್ಯಾತಿ ಅವರಿಗಿದೆ. ಅವರ ಈ ಸೇವೆಯನ್ನು ಗಮನಿಸಿ ಭಾರತ ಸರ್ಕಾರ 70 ರ ದಶಕದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ದೇವರು ಅವರ ಕುಟುಂಬದವರಿಗೆ ಅಗಲಿಕೆಯ ನೋವು ಮತ್ತು ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.

Comments