UK Suddi
The news is by your side.

ಸೀಮಾಂಚಲ ರೈಲು ದುರಂತ: ಮೃತರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಹೊಸದಿಲ್ಲಿ: ಬಿಹಾರದಿಂದ ದೆಹಲಿಗೆ ಬರುತ್ತಿದ್ದ ಸೀಮಾಂಚಲ ಎಕ್ಸಪ್ರೆಸ್ ರೈಲಿನ 9 ಬೋಗಿಗಳು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 7 ಕ್ಕೇರಿದ್ದು, ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ 5 ಲಕ್ಷ ರೂ. ಗಳ ಪರಿಹಾರ ಘೋಷಿಸಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ ಒಂದು ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂ. ಗಳ ಪರಿಹಾರ ಘೋಷಿಸಲಾಗಿದೆ.

ಘಟನೆಯಲ್ಲಿ ಒಟ್ಟು ಹನ್ನೊಂದು ಬೋಗಿಗಳು ಜಖಂಗೊಂಡಿದ್ದು, ಏಳು ಮಂದಿ ಪ್ರಾಣ ಕಳೆದುಕೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 27 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

Comments