UK Suddi
The news is by your side.

ಕಾಂಗ್ರೆಸ್ಗೆ ಮತ್ತೊಂದು ದೊಡ್ಡ ಶಾಕ್-ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ.

ನವದೆಹಲಿ:ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ಸ್ ಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು,ಆಂಧ್ರಪ್ರದೇಶದ ಕಾಂಗ್ರೆಸ್ಸ್ ಮುಖಂಡ ವಿ. ಕಿಶೋರ್ ಚಂದ್ರದೇವ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

‘ಇನ್ಮೇಲೆ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ,ಕಾಂಗ್ರೆಸ್‌ನಲ್ಲಿ ನಾಲ್ಕೇ ನಾಲ್ಕು ಜನ ಬಿಟ್ಟರೆ ಬೇರಾರಿಗೂ ಮಾನ್ಯತೆ ಸಿಗುತ್ತಿಲ್ಲ, ಆಂಧ್ರಪ್ರದೇಶದಲ್ಲಿ ಇಡೀ ಕಾಂಗ್ರೆಸ್ ವ್ಯವಸ್ಥೆ ಅವನತಿಯತ್ತ ಸಾಗುತ್ತಿದೆ’ ಎಂದು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರದ ಮೂಲಕ ದೂರಿದ್ದಾರೆ.

ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಆಂಧ್ರಪ್ರದೇಶದ ಮುಖಂಡ ವಿ. ಕಿಶೋರ್ ಚಂದ್ರದೇವ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಲೋಕ ಚುನಾವಣಾ ಹೊಸ್ತಿಲಲ್ಲಿ ದೊಡ್ಡ ಪೆಟ್ಟು ಬಿದ್ದಂತಾಗಿದೆ.

Comments