UK Suddi
The news is by your side.

ಮಕ್ಕಳ ಸಾಹಿತ್ಯವೆಂದರೆ ಮೌಲ್ಯಗಳ ಖಣಜ:ಸಾಹಿತಿ ಎಸ್ ಎಸ್ ಹಳ್ಳೂರ.

14 ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ
ಯಶಸ್ವಿಯಾದ,ಮಕ್ಕಳ ಸಾಹಿತ್ಯ ದರ್ಶನ ಗೋಷ್ಠಿ

ಬಾಗಲಕೋಟೆ :ಫೆ 2ರಂದು ನೇರವೇರಿದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ದರ್ಶನ ಗೋಷ್ಠಿ ಯಶಸ್ವಿಯಾಗಿ ನೆರವೇರಿತು.

ಅಧ್ಯಕ್ಷತೆಯನ್ನು ಬಿ.ಎಸ್.ಮುಂಡರಗಿ ವಹಿಸಿ ಸಂಸ್ಕøತಿ, ಬಾಷೆ, ಸಾಹಿತ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮುಡಿಸಲು ಇಂಥ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗುತ್ತವೆ ಎಂದರು.

ಕನ್ನಡ ನಾಡಿನ ಸಂಸ್ಕøತಿಯ ಬಗ್ಗೆ ಕು. ಉಷಾ ಎಸ್ ಹುನಗುಂದ ಮಾತನಾಡಿ ಕನ್ನಡ ನಾಡಿನ ಸಂಸ್ಕøತಿಯು ಜಗತ್ತಿನ ಶ್ರೀಮಂತ ಸಂಸ್ಕøತಿಗಳಲ್ಲಿ ಒಂದು ಈ ಸಂಸ್ಕøತಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯದ ಬಗ್ಗೆ ಸಾಹಿತಿ ಎಸ್ ಎಸ್ ಹಳ್ಳೂರ ಮಾತನಾಡಿ ಮಕ್ಕಳ ಸಾಹಿತ್ಯವೆಂದರೆ ಮೌಲ್ಯಗಳ ಖಣಜ ಸರಳ ಭಾಷೆಯಲ್ಲಿ ಲೇಖನ, ಕತೆ, ಹಾಡುಗಳ ಮೂಲಕ ಮೌಲ್ಯಗಳನ್ನು ಹೇಳುವಲ್ಲಿ ಮಕ್ಕಳ ಸಾಹಿತಿಗಳು ನಿರಂತರ ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು.

ಮಾತೃ ಭಾಷೆ ಕನ್ನಡ ಎಂಬ ವಿಷಯ ಕುರಿತು ಕು. ಸುಭಾಷಿಣಿ ಹುಚ್ಚನ್ನವರ ಮಾತನಾಡಿ ಕನ್ನಡ ಒಂದು ಶ್ರೀಮಂತ ಭಾಷೆ, ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಪಡೆದರೆ ಉತ್ತಮ ಎಂದು ಹೇಳಿದಳು.
ಮಕ್ಕಳಿಗೆ ಸಾಹಿತ್ಯ ಏಕೆ ಬೇಕು? ಎಂಬ ವಿಷಯ ಕುರಿತು ಸಾಹಿತಿ ಗುರುರಾಜ ಲೂತಿ ಮಾತನಾಡಿ ಮಗುವಿದ್ದಾಗಲೇ ಸಾಹಿತ್ಯದ ಸಂಸ್ಕಾರ ನೀಡಬೇಕು ಅಂದಾಗ ಮಾತ್ರ ಹೃದಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ವಿವರಿಸಿದರು.

ಬಿ ವಿ ಬಾರಡ್ಡಿ, ಎಚ್ ಆರ್ ಮಾಚಾ, ವಿಕ್ರಮ ಬಸನಗೌಡರ, ಶ್ರೀಮತಿ ಆರ್. ಎಚ್. ಬೇವಿನಗಿಡದ, ಶ್ರೀಮತಿ ಎಲ್. ಟಿ. ಪೂಜಾರ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಸಂಜಯ ನಡುವಿನಮನಿ, ಎಮ್.ಎಮ್.ಮಾಚಾ ಕಾರ್ಯಕ್ರಮ ನಿರೂಪಿಸಿದರು, ಅನೀಲಕುಮಾರ ಜಕ್ಕನಗೌಡ್ರ ವಂದನಾರ್ಪಣೆ ನೇರವೇರಿಸಿದರು.

Comments