UK Suddi
The news is by your side.

ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಡಿಪ್ಲೊಮಾ ವಿದ್ಯಾರ್ಥಿ.

ಯಲ್ಲಾಪುರ:ಮರ ಹತ್ತಿ ಅಡಿಕೆ ಕೊಯ್ಯುವಾಗ ಮರದಿಂದ ಬಿದ್ದು ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಯೋರ್ವ ಸಾವನಪ್ಪಿರುವ ಘಟನೆ ಭಾನುವಾರ ಬೆಳಿಗ್ಗೆ ತಾಲೂಕಿನ ಮುಂಡಗೋಡ ರಸ್ತೆ ಹುಲಗೋಡ ಬಳಿ ನಡೆದಿದೆ.

ಹುಲಗೋಡ ನಿವಾಸಿ ನಾಗರಾಜ ಲಕ್ಷ್ಮಣ ಮಿರಾಶಿ(19) ಎಂಬಾತ ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ.ಮುಂಡಗೋಡ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮೃತ ನಾಗರಾಜ ಅಡಿಕೆ ಕೊಯ್ಯಲು ಮರ ಹತ್ತಿದ ಸಂದರ್ಭದಲ್ಲಿ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದಿದ್ದು,ನಂತರ ಆತನನ್ನು ಯಲ್ಲಾಪುರದ ತಾಲೂಕಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದಾನೆ.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments