UK Suddi
The news is by your side.

ಮಹಿಳೆಯರು ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆ ಗಮನ ಹರಿಸಬೇಕು:ಶಾಸಕಿ ರೂಪಾಲಿ ನಾಯ್ಕ್.

ಬೆಳಗಾವಿ:ನಗರದ ದೈವಜ್ಞ ಮಹಿಳಾ ಮಂಡಳದ ಐವತ್ತನೇಯ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಭಾನುವಾರ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಐವತ್ತು ವರ್ಷಗಳವರೆಗೆ ಈ ಮಹಿಳಾ ಮಂಡಲವನ್ನು ಮುನ್ನಡೆಸಿ ಬಂದಿರುವ ಮಹಿಳಾ ಮಂಡಲದವರಿಗೆ ಅಭಿನಂದಿಸಿದರು,ಇಷ್ಟು ವರ್ಷ ಮಹಿಳಾ ಮಂಡಲವನ್ನು ನಡೆಸಿಕೊಂಡು ಬರುವುದಕ್ಕೆ ಮುಖ್ಯ ಕಾರಣ ಮಹಿಳೆಯರಲ್ಲಿ ಇರುವ ಶೃದ್ದೆ, ಭಕ್ತಿ, ತ್ಯಾಗ ಮನೋಭಾವ ಹಾಗೂ ಸಮಾಜದ ಬಗ್ಗೆ ಇರುವ ಕಳಕಳಿ ಎಂದರು,ಈ ಮಹಿಳಾ ಮಂಡಲವು ಹೆಮ್ಮರವಾಗಿ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಶುಭಕೋರಿದರು.

ಇಂದು ಒಂದು ಹೆಣ್ಣು ಸಮಾಜದ ಕಣ್ಣಾಗಿ, ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಬೆಳಗಿನಿಂದ ಸಂಜೆಯ ವರೆಗು ತನ್ನ ಮನೆಯ ಕೆಲಸ ದಲ್ಲಿ ನಿರತಳಾಗಿರುತ್ತಾಳೆ ಅದರೆ ಪ್ರತಿಯೊಂದು ಮಹಿಳೆಯೂ ತನ್ನ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು ಎಂದರು,ಈ ಮಹಿಳಾ ಮಂಡಲದವರು ಒಟ್ಟಾಗಿ ಸೇರಿಕೊಂಡು ನಡೆಸಿಕೊಂಡು ಬಂದಿರುವ ಈ ಮಂಡಲಕ್ಕೆ ಸದಾ ನನ್ನ ಸಹಕಾರ,ಬೆಂಬಲವಿದೆ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಸದಸ್ಯರು ಎಲ್ಲರೂ ಸೇರಿ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು.

Comments